ಶಿರಸಿ: ಸಾಗವಾನಿ ಕಡಿದು ಸಾಗಾಟ ಮಾಡುತ್ತಿದ್ದ ಇಬ್ಬರು ಅರಣ್ಯ ಸಿಬ್ಬಂದಿ ಬಳಿ ಸಿಕ್ಕಿಬಿದ್ದಿದ್ದಾರೆ.
ದಾಸನಕೊಪ್ಪದ ರಾಜಸಾಬ ಅಲ್ಲಾಭಕ್ಷ ಹಾಗೂ ಹೊಸಕೊಪ್ಪದ ಕಾಂತಪ್ಪ ಚೆನ್ನಯ್ಯ ಎಂಬಾತರು ವದ್ಧಲಾ ಗ್ರಾಮದಲ್ಲಿ ಮರ ಕಡಿದಿದ್ದರು. ಅದನ್ನು ಮಹೇಂದ್ರ ಪಿಕಪ್ ವಾಹನದಲ್ಲಿ ಸಾಗಿಸುವಾಗ ಅರಣ್ಯ ಇಲಾಖೆಯವರು ತಡೆ ಒಡ್ಡಿದ್ದಾರೆ. ವಾಹನದಲ್ಲಿದ್ದ 10 ಸಾಗವಾನಿ ನಾಟುಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.