ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕರವರನ್ನು ಆಯ್ಕೆ ಮಾಡಿ, ಅವರ ಗೆಲುವಿಗೆ ಕಾರಣರಾದ ದೀಪಾ ಬಸ್ತಿ ಅವರನ್ನು ಕೈ ಬಿಟ್ಟಿರುವುದಕ್ಕೆ ನಾಗರಿಕ ವೇದಿಕೆಯೂ ಅಸಮಧಾನವ್ಯಕ್ತಪಡಿಸಿದೆ.
`ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತರಾದ ಕಾರಣ ಕನ್ನಡದ ಹಿರಿಯ ಸಾಹಿತಿ ಬಾನು ಮುಸ್ತಾಕ ಅವರನ್ನು ದಸರಾ ಉದ್ಘಾಟನೆಗೆ ಆಮಂತ್ರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, `ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಬಾರಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಹಾಗೂ ಸಮ್ಮಾನಕ್ಕೆ ಕೇವಲ ಬಾನು ಮುಸ್ತಾಕ್ ಮಾತ್ರ ಅರ್ಹರೇ?’ ಎಂದು ರಾಮು ನಾಯ್ಕ ಅವರು ಪ್ರಶ್ನಿಸಿದ್ದಾರೆ.
`ಬಾನು ಮುಸ್ತಾಕರವರ ಕನ್ನಡ ಸಾಧನೆಯ ಬಗ್ಗೆ ನಮಗೂ ಹೆಮ್ಮೆಯಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿರುವ ಕಾರಣ ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಿರುವ ಬಗ್ಗೆ ತಿಳಿಸಲಾಗಿದೆ. ಬಾನು ಮುಸ್ತಾಕರವರು ಕನ್ನಡದಲ್ಲಿ ಬರೆದಿದ್ದ ಎದೆಯ ಹಣತೆ ಎಂಬ ಕಥಾ ಸಂಕಲನವನ್ನು 20 ವರ್ಷಗಳ ನಂತರ ಮೂಲ ಭಾಷೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಅಚ್ಚುಕಟ್ಟಾಗಿ ಇಂಗ್ಲೀಷ್ ಭಾಷೆಗೆ ಅನುವಾದಿಸಿದ ಮಡಿಕೇರಿಯ ದೀಪಾ ಬಸ್ತಿಯವರು ಈ ಗೌರವಕ್ಕೆ ಸಮಾನ ಪಾಲುದಾರರಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
`ಹಾರ್ಟ ಲ್ಯಾಂಪ್ ಎನ್ನುವ ಹೆಸರಿನಲ್ಲಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಆ ಕೃತಿಯನ್ನು ದೀಪಾ ಬಸ್ತಿಯವರು ಪರಿಚಯಿಸದೇ ಇದ್ದಿದ್ದರೆ ಬಾನು ಮುಸ್ತಾಕರವರಿಗೆ ಬೂಕರ್ ಪ್ರಶಸ್ತಿ ಸಿಗುತ್ತಿರಲಿಲ್ಲ. ಹೀಗಾಗಿ ಈ ವರ್ಷ ಲಂಡನ್‌ನಲ್ಲಿ ಬೂಕರ್ ಪ್ರಶಸ್ತಿ ನೀಡುವಾಗ ದೀಪಾ ಬಸ್ತಿಯವರನ್ನು ಸನ್ಮಾನಿಸಲಾಗಿದೆ. ಆದರೆ, ದಸರಾ ಉದ್ಘಾಟನೆಗೆ ಮಾತ್ರ ಭಾನು ಮುಸ್ತಾಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಹಿಂದು ಎಂಬ ಕಾರಣಕ್ಕೆ ದೀಪಾ ಬಸ್ತಿ ಅವರನ್ನು ಬಿಡಲಾಗಿದೆ’ ಎಂದವರು ದೂರಿದ್ದಾರೆ.
Discussion about this post