ಸಿದ್ದಾಪುರದ ಬೇಡ್ಕಣಿ ಶಾಲೆಯ ಸರ್ಕಾರಿ ಶಿಕ್ಷಕ ಕೆ ಪಿ ರವಿ ವಿದ್ಯಾರ್ಥಿಗಳಿಗೆ ಥಳಿಸಿದ್ದು, ಅವರನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆದರೆ, ಆ ಶಿಕ್ಷಕರ ಅಮಾನತಿಗಾಗಿ ಅಲ್ಲಿನವರು ಪಟ್ಟು ಹಿಡಿದಿದ್ದಾರೆ.
6ನೇ ತರಗತಿ ಓದುವ ಚಿಂತನ ಮಡಿವಾಳ ಅವರು ಹೋಂ ವರ್ಕ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಕೆ ಪಿ ರವಿ ಅವರು ಹೊಡೆದಿದ್ದರು. ಇದರಿಂದ ಚಿಂತನ ಮಡಿವಾಳ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಈ ಬಗ್ಗೆ ಎನ್ಎಸ್ಯುಐ ಮುಖಂಡರಾದ ವಿಶ್ವ ಇಟಗಿ ಶಿಕ್ಷಣ ಇಲಾಖೆಗಹೆ ದೂರು ನೀಡಿದ್ದಾರೆ. ಆದರೆ, ಈವರೆಗೂ ಶಿಕ್ಷಕರ ಅಮಾನತು ಆಗಿಲ್ಲ.
`ಶಿಕ್ಷಕ ಕೆ ಪಿ ರವಿ ಅವರು ಮಕ್ಕಳಿಗೆ ಮೈಮೇಲೆ ಬಾಸುಂಡೆ ಬರುವ ರೀತಿ ಹೊಡೆಯುತ್ತಾರೆ. ಮಕ್ಕಳ ತಲೆಯನ್ನು ಬೆಂಚ್ಗೆ ಕುಟ್ಟಿ, ರಕ್ತ ಬರುವ ರೀತಿ ಮಾಡಿದ್ದಾರೆ. ಮಕ್ಕಳಿಗೆ ಚಿತ್ರ ಹಿಂಸೆ ನೀಡುವ ಬಗ್ಗೆ ದೂರಿದ್ದರೂ ಇಲಾಖೆ ಅವರನ್ನು ಅಮಾನತು ಮಾಡಿಲ್ಲ’ ಎಂದು ವಿಶ್ವ ಇಟಗಿ ಕಾರವಾರದಲ್ಲಿ ಮಾಧ್ಯಮದವರ ಎದುರು ದೂರಿದರು. `ಈ ಹಿಂದೆ ಸಹ ಈ ಶಿಕ್ಷಕರ ವಿರುದ್ಧ ಸಾಕಷ್ಟು ಆರೋಪಗಳಿದ್ದವು. ಶಾಲೆಯ 3 ಮಕ್ಕಳಿಗೆ ಬಾಸುಂಡೆ ಬರುವ ರೀತಿ ಹೊಡೆದಿದ್ದು ಒಬ್ಬನಿಗೆ ಬೆನ್ನು ಮೂಳೆ ಮುರಿದಿತ್ತು’ ಎಂದು ಅನಿಲ ಕೊಠಾರಿ ದೂರಿದರು.
Discussion about this post