• Latest
ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ `ಭರತ್ ಟೂಲ್ಸ್’ ಹೆಸರುವಾಸಿ!

ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ `ಭರತ್ ಟೂಲ್ಸ್’ ಹೆಸರುವಾಸಿ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸ್ವಂತ ಊರಿನಲ್ಲಿಯೇ ಸ್ವ ಉದ್ಯೋಗ: ಕೃಷಿ ಸೇವೆಗೆ `ಭರತ್ ಟೂಲ್ಸ್’ ಹೆಸರುವಾಸಿ!

uknews9.comby uknews9.com
in ವಾಣಿಜ್ಯ
ADVERTISEMENT

ಚಿಕ್ಕದೊಂದು ಬ್ರೆಶ್ ಕಟರ್ ರಿಪೇರಿಗೆ ಹುಬ್ಬಳ್ಳಿ-ಧಾರವಾಡ ಸುತ್ತಾಡಿಕೊಂಡು ಬಂದ ಯಲ್ಲಾಪುರದ ಪ್ರಶಾಂತ ನಾಯ್ಕ ಕೊನೆಗೆ ಶಿರಸಿಯ `ಭರತ್ ಟೂಲ್ಸ್’ ಮುಂದೆ ನಿಂತಿದ್ದರು. ಎಲ್ಲಿಯೂ ರಿಪೇರಿ ಆಗದ ಮೋಟಾರ್ ಅರ್ದ ದಿನದ ಒಳಗೆ ಅಂಕಿತ ಹೆಗಡೆ ದುರಸ್ತಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಪಡೆದ ಶುಲ್ಕ 350ರೂ!
ಶಿರಸಿ ಸಾಲಕಣಿಯ ಗಣಪತಿ ಸಹ ಪೇಟೆ ಕಡೆ ಬಂದಾಗ `ಭರತ್ ಟೂಲ್ಸ್’ ಕಡೆ ಬಾರದೇ ಮನೆಗೆ ಮರಳುವುದಿಲ್ಲ. ಆ ದಿನ ಯಾವುದೇ ವ್ಯವಹಾರ ಇಲ್ಲದಿದ್ದರೂ ಒಮ್ಮೆ ಮಳಿಗೆಗೆ ಬಂದು ಅಂಕಿತ ಹೆಗಡೆಯರನ್ನು ಮಾತನಾಡಿಸುವುದು ಅವರ ರೂಢಿ. ಸಣ್ಣಪುಟ್ಟ ರಿಪೇರಿಗಳಿಂದ ಹಿಡಿದು ದೊಡ್ಡ ದೊಡ್ಡ ಸಾಮಗ್ರಿ ಖರೀದಿಯವರೆಗೂ ಗಣಪತಿಯವರು ಅನೇಕರನ್ನು ಇವರಲ್ಲಿ ಕಳುಹಿಸುತ್ತಾರೆ. ಹೀಗೆ ಉತ್ತಮ ಸೇವೆ ಗಮನಿಸಿ ಅಂಕಿತ್ ಹೆಗಡೆ ಅವರಿಗೆ ಬೆಂಬಲಿಸುತ್ತಿರುವವವರು ಹಲವರಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಾಲ್ಕಣಿ ಬಳಿಯಿರುವ ಕಳಲೆಮಕ್ಕಿಯ ಅಂಕಿತ್ ಹೆಗಡೆ ಐಟಿಐ ಓದಿದ್ದಾರೆ. ಕಾಲೇಜು ಮುಗಿಸಿದ ನಂತರ ಪ್ರತಿಷ್ಟಿತ ಕಂಪನಿಗಳಲ್ಲಿ ದೊಡ್ಡ ಸಂಬಳದ ಉದ್ಯೋಗ ಸಿಕ್ಕರೂ ಆ ಅವಕಾಶವನ್ನು ನಿರಾಕರಿಸಿದ ಅಂಕಿತ್ ಹೆಗಡೆ ಯಲ್ಲಾಪುರ ರಸ್ತೆಯ ಶೆಟ್ಟಿ ಕಾಂಪ್ಲೇಕ್ಸಿನಲ್ಲಿ ಪುಟ್ಟದೊಂದು ಮಳಿಗೆ ನಡೆಸುತ್ತಿದ್ದಾರೆ. ಪವನ್ ಬಜಾಜ್ ಆಟೋ ಶೋ ರೂಂ ಎದುರು ಕಾಣುವ `ಭರತ್ ಟೂಲ್ಸ್’ನಲ್ಲಿ ಅವರು ಇಡೀ ದಿನ ಕಳೆಯುತ್ತಾರೆ. `ಭರತ್’ ಹೆಸರಿನಲ್ಲಿಯೇ ಮೋಟಾರು ತಯಾರಿಕೆಯ ಬ್ರಾಂಡ್ ಮಾಡುವ ವಿಚಾರವನ್ನೂ ಅವರು ಹೊಂದಿದ್ದಾರೆ.

ADVERTISEMENT

ಕಾಲೇಜು ನಂತರ ಮೆಕಾನಿಕ್ ಅಂಗಡಿಯೊoದರಲ್ಲಿ ತರಬೇತಿಪಡೆದ ಅಂಕಿತ್ ಹೆಗಡೆ ನಂತರ 10 ಲಕ್ಷ ರೂ ಹೂಡಿಕೆ ಮಾಡಿ ಸ್ವಂತ ಮಳಿಗೆ ಶುರು ಮಾಡಿದರು. ಗ್ರಾಮೀಣ ಭಾಗದಲ್ಲಿ ಕೃಷಿಕರು ಅನುಭವಿಸುತ್ತಿರುವ ಕಷ್ಟ ನೋಡಿದ ಅವರು ಕೃಷಿಗೆ ಅಗತ್ಯವಿರುವ ಸಲಕರಣೆಗಳ ಸೇವೆಗೆ ಮುಂದಾದರು. ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಅವರು ಕೃಷಿಗೆ ಸಂಬoಧಿಸಿದ ಎಲ್ಲಾ ಉಪಕರಣಗಳ ದುರಸ್ತಿ ಮಾಡುತ್ತಾರೆ. ಜೊತೆಗೆ ಅಗತ್ಯ ಸಾಮಗ್ರಿಗಳ ಮಾರಾಟದಲ್ಲಿಯೂ ಮುಂದಿದ್ದಾರೆ. ಜನರೇಟರ್ ಸೇರಿದಂತೆ ವಿವಿಧ ಪರಿಕ್ಕರಗಳು ಅವರಲ್ಲಿ ಬಾಡಿಗೆ ಆಧಾರದಲ್ಲಿಯೂ ಸಿಗುತ್ತದೆ. ಸಣ್ಣ ಮಿಕ್ಸರಿನಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳವರೆಗೆ ಎಲ್ಲವನ್ನು ದುರಸ್ತಿ ಮಾಡಿಕೊಡುವಲ್ಲಿ ಅಂಕಿತ್ ಹೆಗಡೆ ಮುಂದಿದ್ದಾರೆ.

ಪ್ರಸ್ತುತ ಹಾಸನದ ಬಾಲಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಅಂಕಿತ್ ಹೆಗಡೆ ಅಗತ್ಯವಿದ್ದವರಿಗೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ `ಹೈಟೆಕ್ ದೋಟಿ’ಯನ್ನು ವಿತರಿಸುತ್ತಿದ್ದಾರೆ. ಇತರೆ ಮಳಿಗೆಗಳಲ್ಲಿ 7 ಸಾವಿರ ರೂ ಬೆಲೆಗೆ ಸಿಗುವ ಕೆಲ ಯಂತ್ರೋಪಕರಣಗಳು `ಭರತ್ ಟೂಲ್ಸ್’ನವರಲ್ಲಿ 3500ರೂಪಾಯಿಗೆ ಸಿಗುತ್ತದೆ. ಇಲ್ಲಿನ ವಸ್ತುಗಳು ದರದಲ್ಲಿ ಕಡಿಮೆ ಇದೆಯೇ ವಿನ: ಗುಣಮಟ್ಟದಲ್ಲಿ ಕಡಿಮೆ ಇಲ್ಲ.

`ಭರತ್ ಟೂಲ್ಸ್’ನ ವಿಳಾಸ:
ಅಂಕಿತ್ ಹೆಗಡೆ
ಶೆಟ್ಟಿ ಕಾಂಪ್ಲೇಕ್ಸ್, ಯಲ್ಲಾಪುರ ರಸ್ತೆ
ಶಿರಸಿ – 581402
ಫೋನ್ ನಂ: 8310501788 ಅಥವಾ 9900244823

#Sponsored

ADVERTISEMENT

Discussion about this post

Previous Post

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Next Post

ಮನೆಲೇ ಮಾಡಿದ್ದು… ಅಮ್ಮನೇ ಮಾಡಿದ್ದು… ನೀವು ಬಳಸಿ.. ನಿಮ್ಮವರಿಗೂ ತಿಳಿಸಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋