ಯಲ್ಲಾಪುರ: ಸಬಗೇರಿ ಗಣೇಶ ನಗರದಲ್ಲಿನ ಸರ್ಕಾರಿ ಜಾಗ ಅತಿಕ್ರಮಣಕ್ಕೆ ಸಂಬoಧಿಸಿ ಭೂ ಮಾಪನಾ ಇಲಾಖೆ ಕ್ಷೇತ್ರದ ಸರ್ವೆ ಕಾರ್ಯ ಶುರು ಮಾಡಿದೆ.
ಕಂದಾಯ ಇಲಾಖೆಗೆ ಸೇರಿದ ಜಾಗವನ್ನು 8 ಜನ ಅತಿಕ್ರಮಣ ಮಾಡಿದ ಬಗ್ಗೆ ಕರ್ನಾಟಕ ಸರ್ಕಾರಿ ಆಸ್ತಿ ಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ಮಂಜುನಾಥ ಭಟ್ಟ ಎಂಬಾತರು ದೂರು ಸಲ್ಲಿಸಿದ್ದರು. ಈ ದೂರನ್ನು ಸ್ವೀಕರಿಸಿದ ನ್ಯಾಯಾಲಯ ಭೂಮಿ ಅಳತೆ ಮಾಡುವಂತೆ ಸೂಚನೆ ಹೊರಡಿಸಿದ್ದು, ಅದರ ಪ್ರಕಾರ ಸರ್ವೆ ಸಿಬ್ಬಂದಿ ಭೂ ಮಾಪನಾ ಕಾರ್ಯ ನಡೆಸಿದರು. ಪ್ರಸ್ತುತ ಅತಿಕ್ರಮಣ ಆದ ಪ್ರದೇಶಗಳನ್ನು ಗುರುತು ಮಾಡಿ ಅಲ್ಲಿ ಗಡಿ ಗುರುತಿನ ಕಲ್ಲುಗಳನ್ನು ಹಾಕಲಾಗಿದೆ.
ಸರ್ಕಾರಿ ಜಾಗ ಅತಿಕ್ರಮಿಸಿ ನಿರ್ಮಿಸಿದ ರಸ್ತೆಯಲ್ಲಿ ಕಂದಾಯ ಇಲಾಖೆ ನಾಮಫಲಕ ಅಳವಡಿಸಿದ್ದು, ಅದನ್ನು ಕೆಲವರು ನಾಪತ್ತೆ ಮಾಡಿದ್ದರು. ಆ ನಾಮಫಲಕವನ್ನು ಸಹ ಹುಡುಕಿದ ಅಧಿಕಾರಿಗಳು ಅದನ್ನು ಮತ್ತೆ ಅಲ್ಲಿಯೇ ಹುಗಿದಿದ್ದಾರೆ.