ಅಂಕೋಲಾ: ಯಲ್ಲಾಪುರ ಹೋಲಿ ರೋಜರಿ ಶಾಲೆಯ ಶಿಕ್ಷಕ ಎಂ ರಾಜಶೇಖರ್ ಹಾಗೂ ಅವರ ಶಿಷ್ಯೆ ರೇಣುಕಾ ಬಾಳೆಹೊಸರ ಅವರು ಭಾನುವಾರ ಅಂಕೋಲಾದ ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು.
ಲಯನ್ಸ್ ಕರಾವಳಿ ಸಾವಿತ್ರಿಬಾಯಿ ಫುಲೆ ನೆನಪಿನಲ್ಲಿ ಕೊಡುವ `ಶ್ರೇಷ್ಠ ಶಿಕ್ಷಕ\’ ಪ್ರಶಸ್ತಿಗೆ ಈ ಇಬ್ಬರು ಶಿಕ್ಷಕರು ಭಾಜನರಾದರು. ಪ್ರಸ್ತುತ ಶಿರಸಿ ಗಣೇಶ ನಗರ ಪ್ರೌಢಶಾಲೆ ಶಿಕ್ಷಕಿಯಾಗಿರುವ ರೇಣುಕಾ ಬಾಳೆಹೊಸರ ಅವರು ಯಲ್ಲಾಪುರದ ಹೋಲಿ ರೋಜರಿ ಶಾಲೆಯ ವಿದ್ಯಾರ್ಥಿನಿ. ಈ ಗುರು ಶಿಷ್ಯರು ಐದು ವರ್ಷದ ನಂತರ ಭೇಟಿಯಾಗಿದ್ದು, ಪರಸ್ಪರ ಶುಭಾಶಯ ಕೋರಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಲತಾ ನಾಯಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಾರಿ ಬಸವರಾಜ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರಮಾನಂದ ನಾಯಕ, ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಅನಂತ ಶಂಕರ್, ಲಯನ್ಸ ಅಧ್ಯಕ್ಷ ದೇವಾನಂದ ಬಿ ಗಾಂವ್ಕರ್ ಸಾಧಕ ಶಿಕ್ಷಕರಿಗೆ ಗೌರವಿಸಿದರು.