ಹುಬ್ಬಳ್ಳಿ ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದ ಆಲ್ಟೋ ಕಾರು ಅರಬೈಲ್ ಘಟ್ಟದಲ್ಲಿ ಅಗ್ನಿಗೆ ಆಹುತಿಯಾಗಿದೆ. ಕಾರು ಹೊತ್ತಿ ಉರಿಯುವುದನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ತೆರಳುವದರೊಳಗೆ ಆ ವಾಹನ ಭಾಗಷ: ಸುಟ್ಟು ಕರಕಲಾಗಿತ್ತು.
ಬೆಳಗಾವಿಯ ಶಿವಾಪುರ ಲಗಮಣ್ಣ ಓಣಿ ಅವರು ಭಾನುವಾರ ಈ ಮಾರ್ಗದಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದರು. ಅರಬೈಲ್ ಘಟ್ಟದಲ್ಲಿ ಕಾರಿನ ರೇಡಿಯೇಟರ್ ಬಿಸಿ ಆಯಿತು. ಅದಾಗಿಯೂ ಲಗಮಣ್ಣ ಓಣಿ ಅವರು ಕೆಲ ದೂರ ಕಾರು ಚಲಾಯಿಸಿದರು. ಪರಿಣಾಮ ಆ ಕಾರಿನಲ್ಲಿ ಬೆಂಕಿ ಕಾಣಿಸಿತು. ಬೆಂಕಿ ನೋಡಿದ ಲಗಮಣ್ಣ ಓಣಿ ಅವರು ತಕ್ಷಣ ಕಾರಿನಿಂದ ಇಳಿದು ಜೀವ ಉಳಿಸಿಕೊಂಡರು.
ಕ್ಷಣ ಮಾತ್ರದಲ್ಲಿ ಬೆಂಕಿ ದೊಡ್ಡದಾಗಿದ್ದು ಕಾರಿನ ಜೊತೆ ಅದರಲ್ಲಿದ್ದ ಕೆಲ ದಾಖಲೆ-ವಸ್ತುಗಳು ನಾಶವಾದವು. ಯಲ್ಲಾಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಅರಬೈಲ್ ಘಟ್ಟಕ್ಕೆ ತೆರಳಿ ಇನ್ನೂ ಹೆಚ್ಚಿನ ಅವಘಡ ನಡೆಯುವುದನ್ನು ತಡೆದರು. ಬೆಂಕಿಯಿoದ ಹೊತ್ತಿ ಉರಿಯುತ್ತಿದ್ದ ಕಾರನ್ನು ನೋಡಿದ ಅಗ್ನಿಶಾಮಕ ಸಿಬ್ಬಂದಿ ನೀರು ಹಾಯಿಸಿದರು.
ಈ ಅವಘಡದಿಂದ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಘಟನಾ ಸ್ಥಳದಿಂದ ಎರಡು ಕಡೆ ವಾಹನಗಳು ನಿಂತಿದ್ದವು. ಅಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.
Discussion about this post