
ಸಿದ್ದಾಪುರ: ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಶಿರಸಿಯ ಮೂವರು ಗಾಯಗೊಂಡಿದ್ದಾರೆ.
ಸೆ 22ರ ಶಿರಸಿ ಅಶೋಕನಗರದ ಗಣೇಶ ಉಮಾಪತಿ ಕೂರ್ಸೆ ಅವರು ತಮ್ಮ ಕುಟುಂಬದವರ ಜೊತೆ ಸಿದ್ದಾಪುರದ 16ನೇ ಮೈಲಿಗೆ ಕಾರಿನಲ್ಲಿ ಹೋಗಿದ್ದರು. ರಾತ್ರಿ ಅಲ್ಲಿಂದ ಮರಳುವಾಗ ಗೋವಾದ ಸುನಿಲ ಬೋರ್ಕರ್ ಎಂಬಾತರು ಕಾರಗೋಡು ಕ್ರಾಸಿನ ಬಳಿ ಅವರ ಕಾರಿಗೆ ತನ್ನ ಕಾರು ಗುದ್ದಿದ್ದಾರೆ. ಇದರಿಂದ ಗಣೇಶ ಕೂರ್ಸೆ ಅವರ ಎದೆಗೆ ಪೆಟ್ಟಾಗಿದೆ. ಜೊತೆಗೆ ಅವರ ಕಾರಿನಲ್ಲಿದ್ದ ಶಾಂತಾ ಗಣೇಶ ಭಟ್ಟ, ಗೀತಾ ರಮೇಶ ಭಟ್ಟ ಸಹ ಗಾಯಗೊಂಡಿದ್ದಾರೆ. ಕಾರು ಸಹ ಜಖಂ ಆಗಿದೆ.