ಕಾರವಾರದ ನಂದನಗದ್ದಾ ಬಾಡದ ಮಹಾದೇವರ ಹೊಸ್ತಿಲ ಹಬ್ಬ ಸೆಪ್ಟೆಂಬರ್ 24ರಂದು ನಡೆಯಲಿದೆ. ಆ ದಿನ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಬೆಳಗ್ಗೆ 8ಗಂಟೆಗೆ ಮಹಾದೇವರ ಹೊಸ್ತಿಲ ಹಬ್ಬ (ನವೆ) ನೆರೆವೇರಿಸಲಾಗುತ್ತದೆ. 9 ಗಂಟೆಗೆ ಕಳಸ ದೇವಸ್ಥಾನದಲ್ಲಿರುವ ಕಾಂಚಿಕಾಪರಮೇಶ್ವರಿ ದೇವಸ್ಥಾನದಿಂದ ಕಳಸ ಹೊರಡಲಿದೆ. ಮೊದಲಿನಿಂದಲೂ ನಡೆದ ಪರಂಪರೆಯAತೆ ಕಳಸವು ಗಣಪತಿ ದೇವಸ್ಥಾನ ಮಾರ್ಗವಾಗಿ ಸಂಚರಿಸಲಿದೆ. ಶೇಭಿದೇವಸ್ಥಾನ, ಕಳಸವಾಡ ಮುಖಾಂತರ ಕಳಸವೂ ದೇವತಿದೇವಿ ಬಾಡಕ್ಕೆ ತಲುಪಲಿದೆ. ಅದಾದ ನಂತರ ಅಲ್ಲಿ ಅದ್ಧೂರಿಯಾಗಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ನಂತರ ಕಳಸ ದೇವಸ್ಥಾನಕ್ಕೆ ಮರಳಲಿದ್ದು, ಅಲ್ಲಿಯೂ ವಿಶೇಷ ಪೂಜೆ ನೆರವೇರಲಿದೆ.
ಅಕ್ಟೊಬರ್ 2ರ ವಿಜಯ ದಶಮಿ ಅಂಗವಾಗಿ ಮಹಾದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಆ ದಿನ ಸಂಜೆ 4 ಗಂಟೆಗೆ ಮಹಾದೇವಸ್ಥಾನದಿಂದ ಬ್ರಹ್ಮಕಟ್ಟಾ ವಾಘಳೆವಾಡಕ್ಕೆ ಮೆರವಣಿಗೆ ಸಾಗಲಿದೆ. ನಂತರ ಪಲ್ಲಕ್ಕಿಯೂ ಮಹಾದೇವಸ್ಥಾನಕ್ಕೆ ಮರಳಲಿದ್ದು, ಅಲ್ಲಿ ಬನ್ನಿ ಪೂಜೆ ನೆರವೇರಿಸಲಾಗುತ್ತದೆ. `ಈ ಎಲ್ಲಾ ಧಾರ್ಮಿಕ ಆಚರಣೆಗಳು ಪ್ರತಿ ವರ್ಷದ ಪರಂಪರೆಯAತೆಯೇ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು’ ಎಂದು ಸರಕಾರದಿಂದ ನೇಮಕವಾದ ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಕೋರಿದ್ದಾರೆ.
Discussion about this post