ಯಲ್ಲಾಪುರದ ತೋಗಲು ಹರಳಯ್ಯ ಟ್ರಸ್ಟಿನ ಸಾಮಾನ್ಯ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಭಾಗವಹಿಸಿದ್ದು, ಟ್ರಸ್ಟ್ ಸದಸ್ಯರಿಗೆ ವಿವಿಧ ಸೂಚನೆ ನೀಡಿದ್ದಾರೆ.
ಯಲ್ಲಾಪುರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಟ್ರಸ್ಟಿನ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಯಲ್ಲಾಪುರಕ್ಕೆ ಆಗಮಿಸಿದ್ದ ಜಗದೀಶ ಶೆಟ್ಟರ್ ಅವರು ಸಾಮಾನ್ಯ ಸಭೆಯಲ್ಲಿ ಭಾಗಿಯಾದರು. ಟ್ರಸ್ಟಿನ ಕಾರ್ಯವೈಖರಿಯ ಬಗ್ಗೆ ಜಗದೀಶ ಶೆಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘಟನೆಯ ಧೈಯ – ಉದ್ದೇಶಗಳ ಕುರಿತು ಸದಸ್ಯರಿಂದ ಮಾಹಿತಿಪಡೆದರು. ಸುಮಾರು 10 ನಿಮಿಷಗಳ ಕಾಲ ಸಂಘಟನೆಯವರ ಜೊತೆ ಚರ್ಚೆ ನಡೆಸಿದರು. ಅದಾದ ನಂತರ ತಮ್ಮ ಕಾರ್ಯವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತೆ ಜಗದೀಶ ಶೆಟ್ಟರ್ ಅವರು ಸಲಹೆ ನೀಡಿದರು.
ತೋಗಲು ಹರಳಯ್ಯ ಟ್ರಸ್ಟಿನ ಅಧ್ಯಕ್ಷ ಜಗನ್ನಾಥ ರೆವಣಕರ್, ಪದಾಧಿಕಾರಿಗಳಾದ ಗಣೇಶ ಪಾಟಣಕರ್, ಸಂತೋಷ ಪಾಟಣಕರ್, ನಿರಂಜನ್ ಪಾಟಣಕರ್, ರವಿ ಪಾಟಣಕರ್, ಬಾಲು ಬೊರಕರ್ ಮೊದಲಾದವರು ಇದ್ದರು.
Discussion about this post