ಕಳೆದ ಕೆಲ ದಿನಗಳಿಂದ ದಾಂಡೇಲಿಯ ವಸತಿ ಪ್ರದೇಶಗಳಿಗೆ ಬರುತ್ತಿದ್ದ ಕಪ್ಪು ಚಿರತೆ ಇದೀಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದೆ. ಸಾಯಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಚಿರತೆ ಓಡಾಟದ ದೃಶ್ಯ ಸೆರೆ ಸಿಕ್ಕಿದೆ.
ಮಂಗಳವಾರ ನಸುಕಿನ 3 ಗಂಟೆ ಅವಧಿಯಲ್ಲಿಯೂ ಚಿರತೆಯ ಚಿತ್ರ ಸ್ಪಷ್ಟವಾಗಿ ಸೆರೆಯಾಗಿದೆ. 31 ಸೆಕೆಂಡುಗಳ ಕಾಲ ಚಿರತೆ ಓಡಾಡಿದ ದೃಶ್ಯವನ್ನು ಅಲ್ಲಿ ಅಳವಡಿಸಿದ್ದ ಕ್ಯಾಮರಾ ಸೆರೆ ಹಿಡಿದಿದೆ. ದಾಂಡೇಲಿ ನಗರಸಭೆಯ ಮಾಜಿ ಉಪಾಧ್ಯಕ್ಷ ಸಂಜಯ ನಂದ್ಯಾಳಕರ್ ಅವರ ಮನೆ ಅಂಗಳದಲ್ಲಿ ಚಿರತೆ ಓಡಾಡಿದೆ.
ಕೆಲ ದಿನಗಳ ಹಿಂದೆ ರಾತ್ರಿ ಚಿರತೆ ಓಡಾಡಿದ ಕುರುಹುಗಳು ಕಾಣಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಸಂಜಯ ನಂದ್ಯಾಳಕರ್ ಅವರು ಕ್ಯಾಮರಾ ಅಳವಡಿಸಿದ್ದರು. ನಸುಕಿನ ಅವಧಿಯಲ್ಲಿ ಚಿರತೆ ಕಟ್ಟಡದ ಸುತ್ತಲು ಓಡಾಟ ನಡೆಸಿರುವುದು ಇದರಿಂದ ಖಚಿತವಾಗಿದೆ. ವಸತಿ ಪ್ರದೇಶಕ್ಕೆ ವನ್ಯಜೀವಿ ಆಗಮನ ಆಗಿರುವುದನ್ನು ನೋಡಿ ಆ ಭಾಗದ ಜನ ಆತಂಕದಲ್ಲಿದ್ದಾರೆ.
Discussion about this post