ಯಲ್ಲಾಪುರದ ಕಾನೂರು ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬರು ನೀರುಪಾಲಾಗಿದ್ದಾರೆ. ಅವರ ಶೋಧ ಮುಂದುವರೆದಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಹಳಿಯಾಳ ಇಂಜಿನಿಯರ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ಮಂಗಳವಾರ ಯಲ್ಲಾಪುರಕ್ಕೆ ಬಂದಿದ್ದರು. ಅವರೆಲ್ಲರೂ ಒಂದೇ ತರಗತಿಯವರಾಗಿದ್ದು, ಕಾನೂರು ಜಲಪಾತ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ಸಾಕಷ್ಟು ಕಾಲ ಮೋಜು-ಮಸ್ತಿಯಲ್ಲಿ ತೊಡಗಿದ್ದ ಆ ವಿದ್ಯಾರ್ಥಿಗಳು ಸಂಜೆ ಮರಳುವ ಸಿದ್ಧತೆಯಲ್ಲಿದ್ದರು. ಅಷ್ಟರೊಳಗೆ ಅವರಲ್ಲಿದ್ದ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದು, ಉಳಿದವರು ಇದರಿಂದ ಆಘಾತಕ್ಕೆ ಒಳಗಾದರು.
ಸ್ಥಳೀಯ ಗ್ರಾಮ ಅರಣ್ಯ ಸಮಿತಿಯವರಿಗೆ ವಿಷಯ ಗೊತ್ತಾಗಿ ಅವರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧಾರವಾಡ ಮೂಲದ ಸೋಹಿಲ್ ಖಾನ್ ನೀರು ಪಾಲಾದ ಇಂಜಿನಿಯರಿoಗ್ ವಿದ್ಯಾರ್ಥಿಯಾಗಿದ್ದಾರೆ. ಈವರೆಗೂ ಅವರ ಶೋಧ ಕಾರ್ಯಾಚರಣೆ ನಡೆದಿದ್ದು, ಅತ್ಯಂತ ಎತ್ತರದ ಪ್ರದೇಶದಿಂದ ನೀರಿಗೆ ಬಿದ್ದಿರುವ ಕಾರಣ ಅವರ ಬಗ್ಗೆ ಕಿಂಚಿತ್ತು ಸುಳಿವು ಸಿಗುತ್ತಿಲ್ಲ. ಅದಾಗಿಯೂ ರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Discussion about this post