ದಿನದಿಂದ ದಿನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರ ಆರೋಗ್ಯದ ವಿಷಯದಲ್ಲಿ ಕಾಳಜಿವಹಿಸಿರುವ ಜಿಲ್ಲಾಡಳಿತ ಮಾದಕ ವ್ಯಸನ ತಡೆಗೆ ವಿನೂತನ ಚಿಂತನೆಗಳನ್ನು ಜಾರಿಗೆ ತರುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಪೊಲೀಸ್ ಇಲಾಖೆ ಬಗೆ ಬಗೆಯ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿ ಪ್ರಮುಖ ಸ್ಥಳಗಳಲ್ಲಿ ಕ್ಯೂ ಆರ್ ಕೋಡ್ ಅಂಟಿಸಿ ಅದರ ಮೂಲಕ ಜನ ದೂರು ನೀಡುವಂತೆ ಕೋರಲಾಗಿದೆ. ಕ್ಯೂ ಆರ್ ಕೋಡ್ ಸುರಕ್ಷಿತವಾಗಿದ್ದು, ಇಲ್ಲಿ ದೂರು ನೀಡಿದವರ ಹೆಸರು-ವಿಳಾಸವನ್ನು ರಹಸ್ಯವಾಗಿರಲಿದೆ. 2019ರಿಂದ ಈವರೆಗೆ ಒಟ್ಟು 783 ಗಾಂಜಾ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆ ಪೈಕಿ 575 ಜನ 30 ವರ್ಷದ ಒಳಗಿನವರಾಗಿದ್ದಾರೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 39.25 ಲಕ್ಷ ರೂ ಮೌಲ್ಯದ 94 ಕೆಜಿ ಪ್ರಮಾಣದಲ್ಲಿ ಗಾಂಜಾವನ್ನು ಪೊಲೀಸರು ನಾಶ ಮಾಡಿದ್ದಾರೆ.
ಯುವ ಜನತೆಯ ಜೊತೆ ಪೋಷಕರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಮಾದಕ ವಸ್ತು ಎಂದು ಕಂಡುಕೊAಡಿರುವ ಜಿಲ್ಲಾಡಳಿತ ವ್ಯಸನಕ್ಕೆ ಒಳಗಾದವರನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯೂ ಮಾದಕ ವಸ್ತುಗಳ ಸಾಗಾಟ, ಹಂಚಿಕೆ ಮತ್ತು ಬಳಕೆ ಕುರಿತು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಳವಡಿಸಿ ಅದರ ಮೂಲಕ ದೂರು ನೀಡುವ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶೀಘ್ರದಲ್ಲಿಯೇ ಕ್ಯೂಆರ್ ಕೋಡ್ ಕಾಣಿಸಲಿದೆ.
ಮಾದಕ ವಸ್ತುಗಳ ಸೇವನೆ ಮಾಡುವವರ ಬಗ್ಗೆ ಜನ ಇಲ್ಲಿ ಮಾಹಿತಿ ಕೊಡಬಹುದು. ಮಾದಕ ವಸ್ತು ಮಾರಾಟ ಮಾಡುವವರ ಬಗ್ಗೆಯೂ ತಿಳಿಸಬಹುದು. ಕ್ಯೂಆರ್ ಕೋಡ್ ಸ್ಕಾನ್ ಮಾಡಿದ ತಕ್ಷಣ ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆ ತೆರೆದುಕೊಳ್ಳಲಿದ್ದು, ಅಲ್ಲಿ ದೂರು ನೀಡಬಹುದು. ಇದಕ್ಕೆ ಪೂರಕವಾಗಿ ಫೋಟೋ-ವಿಡಿಯೋ, ಲೊಕೇಶನ್ ವಿವರವನ್ನು ಸಹ ಕಳಿಸಲು ಅವಕಾಶಗಳಿದೆ. ಈ ದೂರಿನ ಆಧಾರದಲ್ಲಿ ಪೊಲೀಸರು ಆ ಸ್ಥಳಕ್ಕೆ ತೆರಳಿ ದಾಳಿ ನಡೆಸಲಿದ್ದಾರೆ. ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದಾರೆ.
Discussion about this post