ಕುಮಟಾದ ಜನತಾ ಪ್ಲೋಟಿನ ಲಕ್ಷ್ಮೀ ನಾಯ್ಕ ಅವರ ಮನೆ ಮೇಲೆ ಅತ್ಯಂತ ಅಪಾಯಕಾರಿ ವಿದ್ಯುತ್ ತಂತಿ ಜೋತಾಡುತ್ತಿದೆ. ಅದನ್ನು ಸರಿಪಡಿಸಿಕೊಡುವಂತೆ ಅವರು ಹೆಸ್ಕಾಂ ಸೇರಿ ವಿವಿಧ ಕಚೇರಿಗೆ ಪತ್ರ ಬರೆದಿದ್ದಾರೆ. ಆದರೆ, ಆ ಪತ್ರ ಅಧಿಕಾರಿಗಳಿಗೆ ತಲುಪಿ ಆರು ತಿಂಗಳಾದರೂ ಕ್ರಮ ಆಗಿಲ್ಲ.
ಲಕ್ಷ್ಮೀ ನಾಯ್ಕ ಅವರ ವಸತಿಗೆ ಯೋಗ್ಯವಾದ ಮನೆ ಇಲ್ಲ. ಅನೇಕ ವರ್ಷಗಳ ಹೋರಾಟದ ನಂತರ ಸರ್ಕಾರಿ ನೆರವಿನಲ್ಲಿ ಅವರು ಮನೆ ನಿರ್ಮಿಸಿಕೊಂಡಿದ್ದು, ಆ ಮನೆಗೆ ಇದೀಗ ವಿದ್ಯುತ್ ಅಪಾಯ ಸುತ್ತಿಕೊಂಡಿದೆ. ವಿದ್ಯುತ್ ತಂತಿ ಮೈಮೇಲೆ ಬಿದ್ದರೆ ಜೀವಕ್ಕೆ ಅಪಾಯವಾಗುವ ಬಗ್ಗೆ ಅವರು ಆತಂಕದಲ್ಲಿದ್ದಾರೆ. ಈ ಬಗ್ಗೆ ಅವರು ಗ್ರಾಮ ಪಂಚಾಯತ ಹಾಗೂ ತಾಲೂಕು ಪಂಚಾಯತಗೆ ನೀಡಿದ ಪತ್ರ ಹೆಸ್ಕಾಂ ಅಧಿಕಾರಿಗಳಿಗೆ ವರ್ಗವಾಗಿದೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ.
`ತಮ್ಮ ಸಮಸ್ಯೆ ಬಗೆಹರಿಸಿ’ ಎಂದುಲಕ್ಷ್ಮೀ ನಾಯ್ಕ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಲ್ಲಿ ಅಳಲು ತೋಡಿಕೊಂಡಿದ್ದಾರೆ. `ಮೊದಲು ಮಳೆಗಾಲ ಎನ್ನುವ ಕಾರಣ ಕೆಲಸ ಮಾಡದ ಅಧಿಕಾರಿಗಳು ಇದೀಗ ಮತ್ತೊಂದು ಸಬೂಬು ಹೇಳುತ್ತಿದ್ದಾರೆ. ಜನರ ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿಯೂ ಸತಾಯಿಸುತ್ತಿದ್ದಾರೆ’ ಎಂದು ಆಗ್ನೇಲ್ ರೋಡ್ರಿಗಸ್ ಆಕ್ರೋಶವ್ಯಕ್ತಪಡಿಸಿದರು.
Discussion about this post