ಕಾರವಾರದ ಯುನಿಟಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಜಾವೇದ್ ಮುಲ್ಲಾ ಅವರು ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಅವರು ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅನೇಕ ಮಕ್ಕಳನ್ನು ರಾಜ್ಯ ಮತ್ತು ರಾಷ್ಟçಮಟ್ಟದ ಸ್ಪರ್ಧೆಗಳಿಗೆ ಕರೆದೊಯ್ದಿದ್ದರು. ವಿಜ್ಞಾನ ವಿಭಾಗದಲ್ಲಿ ಮಕ್ಕಳು ಶೇ 100 ಸಾಧನೆ ಮಾಡುವಲ್ಲಿ ಅವರ ಕೊಡುಗೆ ಅಪಾರವಾಗಿತ್ತು.
ವಿಜ್ಞಾನ ಶಿಕ್ಷಕರ ಕ್ಲಬ್ ಶುರುವಾದಾಗ ಅದರ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರಾಗಿಯೂ ಅವರು ಕೆಲಸ ಮಾಡುತ್ತಿದ್ದರು.
ಆರೋಗ್ಯವಾಗಿಯೇ ಇದ್ದ ಜಾವೇದ್ ಮುಲ್ಲಾ ಅವರು ಏಕಾಏಕಿ ಸಾವನಪ್ಪಿರುವ ಸುದ್ದಿ ಕೇಳಿ ಶೈಕ್ಷಣಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಆಘಾತವಾಗಿದೆ. ಅದರಲ್ಲಿಯೂ ವಿಜ್ಞಾನ ಶಿಕ್ಷಕರು ಹಾಗೂ ಅವರ ಆಪ್ತರು ದುಖಃದಲ್ಲಿದ್ದಾರೆ.
Discussion about this post