ಹಳಿಯಾಳದ ಸಂಜು ಪಿಂಪಳಕರ್ ಅವರ ಟಾಕ್ಟರ್ ಕದ್ದು ಪರಾರಿಯಾಗಿದ್ದ ರಾಹುಲ್ ಜಾದವ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟಾಕ್ಟರನ್ನು ಸಹ ವಶಕ್ಕೆಪಡೆದಿದ್ದಾರೆ.
ಹಳಿಯಾಳ ಮುರ್ಕವಾಡದ ಸಂಜು ಪಿಂಪಳಕರ್ ಅವರು ಶಾಮಿಯಾನ ಹಾಕುವ ಕೆಲಸ ಮಾಡುತ್ತಾರೆ. ಜೊತೆಗೆ ತಮ್ಮ ಕೃಷಿ ಕೆಲಸಕ್ಕಾಗಿ ಅವರು ಟಾಕ್ಟರನ್ನು ಬಳಸುತ್ತಾರೆ. ಅಗಸ್ಟ 16ರಂದು ಹಳಿಯಾಳ ಕಲಘಟಕಿ ರಸ್ತೆಯ ಸತ್ಯಪುರುಷ ಸ್ಟೋರ್ಸಿನ ಬಳಿ ಅವರು ತಮ್ಮ ಟಾಕ್ಟರ್ ನಿಲ್ಲಿಸಿದ್ದರು. ಆ ಟಾಕ್ಟರ್ ನೋಡಿದ ಮಹಾರಾಷ್ಟçದ ರಾಹುಲ್ ಜಾದವ್ ಟ್ರಾಲಿಸಹಿತ ಅದನ್ನು ಕದ್ದೊಯ್ದರು.
4.80 ಲಕ್ಷ ರೂ ಮೌಲ್ಯದ ಟಾಕ್ಟರ್ ಹಾಗೂ ಟ್ರಾಲಿ ಕಾಣೆಯಾದ ಬಗ್ಗೆ ಸಂಜು ಪಿಂಪಳಕರ್ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ವಿಶೇಷ ತಂಡ ರಚಿಸಿ ಟಾಕ್ಟರ್ ಹುಡುಕಾಟ ನಡೆಸಿದರು. ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಯಲ್ಲಿ ರಾಹುಲ್ ಜಾದವ್ ಟಾಕ್ಟರ್ ಓಡಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ಆದರೆ, ರಾಹುಲ್ ಜಾದವ್ ಅವರ ಹೆಸರು-ವಿಳಾಸ ಹುಡುಕಾಟ ಪೊಲೀಸರಿಗೆ ಕಷ್ಟವಾಯಿತು.
ಅದಾಗಿಯೂ ವಿವಿಧ ತಂತ್ರಜ್ಞಾನಗಳ ನೆರವುಪಡೆದು ರಾಹುಲ್ ಜಾದವ್ ಅವರ ವಿಳಾಸವನ್ನು ಪೊಲೀಸರು ಹುಡುಕಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ರಚಿಸಿದ ವಿಶೇಷ ತಂಡದವರು ರಾಹುಲ್ ಜಾದವ್ ಓಡಾಡುತ್ತಿದ್ದ ಸ್ಥಳ ಪತ್ತೆ ಮಾಡಿದರು.
ಪಿಐ ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರು, ಕೃಷ್ಣ ಅರಕೇರಿ, ಲಕ್ಷö್ಮಣ ಪೂಜಾರಿ, ಶೈಲೇಶ ಬಿ ಎಂ, ವಿನೋದ ಜಿಬಿ, ಮಂಜುನಾಥ ಬಾಲಿ, ಮಲ್ಲಿಕಾರ್ಜುನ ಕುದರಿ, ಕಾಶಿನಾಥ ಬಿಳ್ಳೂರು ಸೇರಿ ರಾಹುಲ್ ಜಾದವ್ ಅವರನ್ನು ಬಂಧಿಸಿದರು. ಟಾಕ್ಟರ್ ಕದ್ದ ಬಗ್ಗೆ ರಾಹುಲ್ ಜಾದವ್ ಒಪ್ಪಿಕೊಂಡಿದ್ದು, ಆ ಟಾಕ್ಟರನ್ನು ಮರಳಿಸಿದರು.
Discussion about this post