ಕುಮಟಾದಲ್ಲಿ ವಾಸಿಸುತ್ತಿರುವ ಅರಣ್ಯ ಅತಿಕ್ರಮಣದಾರರು ಅಕ್ಟೊಬರ್ 4ರಂದು ಶಿರಸಿಗೆ ತೆರಳಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಸಾವಿರಾರು ಜನ ಒಟ್ಟಿಗೆ ತೆರಳಿ `ನಮ್ಮ ಹಕ್ಕು ತಮಗೆ ಕೊಡಿ’ ಎಂದು ಘೋಷಣೆ ಮೊಳಗಿಸಲು ನಿರ್ಣಯಿಸಿದ್ದಾರೆ.
ಮಾಸ್ತಿಕಟ್ಟ ಸಭಾಂಗಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ಗುರುವಾರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕರಿಸಿದ ಅರ್ಜಿಗೆ ಕುಮಟಾದ ಜನ ವಿರೋಧವ್ಯಕ್ತಪಡಿಸಿದ್ದಾರೆ. ಶಿರಸಿಗೆ ಹೋಗಿ ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.
`ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತಿರಸ್ಕರಿಸಿದ ಪಟ್ಟಿಯಲ್ಲಿ ಕುಮಟಾ ತಾಲೂಕಿನ 6160 ಅರ್ಜಿಗಳು ತಿರಸ್ಕಾರವಾಗಿದೆ. ಕೇವಲ 137 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂದು ಮಂಜುನಾಥ ಮರಾಠಿ ಸಭೆಗೆ ಮಾಹಿತಿ ನೀಡಿದರು. ಪ್ರಮುಖರಾದ ಮಹೇಂದ್ರ ನಾಯ್ಕ ಕತಗಾಲ, ಗಜಾನನ ನಾಯ್ಕ ಸಾಲ್ಕೋಡ, ಅಮೋಜ್ ಮಲ್ಲಾಪುರ, ಸೀತಾರಮ ಬುಗರಿಬೈಲ್ ಗಣಪತಿ ಮಾರಾಠಿ. ಸುನಿಲಾ ಹರಿಕಾಂತ್ರ ಇದಕ್ಕೆ ಆಕ್ರೋಶವ್ಯಕ್ತಪಡಿಸಿದರು. ಸುರೇಶ್ ಭಟ್ ನಾಗೂರು, ಶಾಂತಿ ಮುಕ್ರಿ ನಿಲ್ಕೋಡ, ಶಂಕರ ಗೌಡ ಕಂದವಳ್ಳಿ, ಯೋಗೇಶ ಗೌಡ ಬೆಟ್ಕುಳಿ, ಯಾಕುಬ್ ಸಾಬ ಬೆಟ್ಕುಳಿ, ಜಗದೀಶ ನಾಯ್ಕ ಕತಗಾಲ, ಕೆ ಜೆ ಜೋರ್ಜ ಶಿರಸಿ ಚಲೋಗೆ ಒಮ್ಮತ ಸೂಚಿಸಿದರು.
Discussion about this post