ಅಂಕೋಲಾ: ಬೇಲಿಕೇರಿ ಸುರೇಶ ದತ್ತಾ ಬಾನಾವಳಿಕರ್ ಅವರನ್ನು ಅವರ ಮಗ ಅಜಯ ಸುರೇಶ ಬಾನಾವಳಿಕರ್ ಹಾಗೂ ಪತ್ನಿ ಪ್ರಭಾವತಿ ಸುರೇಶ್ ಬಾನಾವಳಿಕರ್ ಸೇರಿ ಮನೆಯಿಂದ ಹೊರ ಹಾಕಿದ್ದಾರೆ.
ಕೆಲ ದಿನಗಳಿಂದ ಸುರೇಶ ಬಾನಾವಳಿಕರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ಅವರನ್ನು ಮನೆಯವರು ದೂರ ತಳ್ಳಿದ್ದಾರೆ. ಮನೆಯಲ್ಲಿ ಇದ್ದಾಗ ಸಹ ಅವರಿಗೆ ಊಟ-ತಿಂಡಿ ಕೊಡುತ್ತಿರಲಿಲ್ಲ. ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಇದೀಗ ಸುರೇಶ್ ಅವರನ್ನು ಮನೆಯಿಂದ ಹೊರ ದಬ್ಬಿದ್ದಾರೆ. ಈ ಹಿನ್ನಲೆ ಸುರೇಶ್ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. `ತನ್ನನ್ನು ಪತ್ನಿ ಹಾಗೂ ಮಗ ಸರಿಯಾಗಿ ನೋಡಿಕೊಳ್ಳಬೇಕು\’ ಎಂದು ಸುರೇಶ್ ಆಗ್ರಹಿಸಿದ್ದಾರೆ.