ದಾಂಡೇಲಿ: ಕಾಳಿ ನದಿಗೆ ಹಾರಿದ ಮಹಿಳೆ ಸಾವನಪ್ಪಿದ್ದು, ಆಕೆಯ ಶವವನ್ನು ಕುಟುಂಬದವರು ಗುರುತಿಸಿದ್ದಾರೆ.
ಬುಧವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಗಣೇಶನಗರದ ರೇಖಾ ಶಿವಾನಂದ ಕಂಬಾರಗಣವಿ ನದಿಗೆ ಹಾರಿದ್ದರು. ಶನಿವಾರ ಅವರ ಶವ ಕರಿಯಂಪಾಲಿ ಗ್ರಾಮದ ನದಿಯಲ್ಲಿ ಕಾಣಿಸಿದೆ. ಶುಕ್ರವಾರ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಮಹಿಳೆ ಪತ್ತೆಯಾಗಿರಲಿಲ್ಲ. ಆತ್ಮಹತ್ಯೆಗೆ ಈವರೆಗೂ ಸರಿಯಾದ ಕಾರಣ ಗೊತ್ತಾಗಿಲ್ಲ.