ಯಲ್ಲಾಪುರ: ನಾಯ್ಕನಕೆರೆಯ ಶಾರದಾಂಬಾ ದೇವಾಲಯ ಬಳಿಯ ಸಂಸ್ಕೃತ ಪಾಠಶಾಲೆಯಲ್ಲಿ ಆರ್ಟ ಆಫ್ ಲಿವಿಂಗ್\’ನ ಶಿಬಿರ ನಡೆದಿದ್ದು, ಭಾನುವಾರ ಶ್ರೀ ಶ್ರೀ ರವಿಶಂಕರ್ ಗುರೂಜಿ ಆನ್ಲೈನ್ ಮೂಲಕ ಸಹಜ ಸಮಾಧಿ ಧ್ಯಾನ ಸಂದೇಶ ರವಾನಿಸಿದರು.
ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ನಡೆದ ಈ ಶಿಬಿರವನ್ನು ಆರ್ಟ ಆಫ್ ಲಿವಿಂಗ್\’ನ ಶಿಕ್ಷಕಿ ದೀಪಿಕಾ ಚಲಂಗರ್ ಕೆ ಹೇಳಿಕೊಟ್ಟರು. ಶನಿವಾರ ಹಾಗೂ ಭಾನುವಾರ ಭಾನು ನರಸಿಂಹನ್ ಅವರು ಆನ್ಲೈನ್ ಮೂಲಕ ಶಿಬಿರಾರ್ಥಿಗಳಿಗೆ ಧ್ಯಾನ ಮಾಡಿಸಿದರು. ಉಸಿರಾಟ ಪ್ರಕ್ರಿಯೆ, ನಾಡಿಶೋಧ ಪ್ರಾಣಾಯಾಮ, ಮಂತ್ರಧೀಕ್ಷೆಸಹಿತ ಧ್ಯಾನದ ಬಗ್ಗೆ ತಿಳಿಸಿಕೊಡಲಾಯಿತು. ನಿತ್ಯದ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಲಾಯಿತು. 52 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಹಜ ಸಮಾಧಿ ಧ್ಯಾನ ಶಿಬಿರದಲ್ಲಿ ಭಾಗಿಯಾದವರು ಸಂತಸದ ಅನುಭವ ಹಂಚಿಕೊoಡರು. 82 ದೇಶಗಳಲ್ಲಿ ಏಕಕಾಲದಲ್ಲಿ ಈ ಶಿಬಿರ ನಡೆಯುತ್ತಿದೆ.
ಮುಖ್ಯ ಮಾಹಿತಿ:
ಅಕ್ಟೋಬರ್ ಅಂತ್ಯಕ್ಕೆ ಆರ್ಟ ಆಫ್ ಲಿವಿಂಗ್\’ನ ಆರು ದಿನ ಕಾಲದ ಆನಂದೋತ್ಸವ ಶಿಬಿರ ಯಲ್ಲಾಪುರದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುವವರು ದೀಪಿಕಾ 8618645279, ನಾರಾಯಣ ಸಭಾಹಿತ 8762520989 ಅಥವಾ ಸದಾನಂದ ದಬಗಾರ 9480086529 ಗೆ ಕರೆ ಮಾಡಿ.