ಶಿರಸಿ: ಹುಸರೀ ರಸ್ತೆಯ ಕಸ್ತೂರಿಬಾನಗರ ಕ್ರಾಸ್ ಹತ್ತಿರ ಅಂದರ್ ಬಾಹರ್ ಆಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಆಟಗಾರರು ಸಿಕ್ಕಿಬಿದ್ದಿದ್ದಾರೆ.
ಕಸ್ತೂರಿಬಾ ನಗರದ ಸಮೀರ್ ಖಾನ್ ಇಬ್ರಾಹಿಂ ಖಾನ್, ರಾಜೀವನಗರದ ಅಲ್ತಾಫ್ ಇಬ್ರಾಹಿಂ ಖಾನ್, ಬೇಕ್ರಿ ಸರ್ಕಲಿನ ಮೊಹಮ್ಮದ್ ಕಾಸಿಂ ನೂರಮ್ಮದ್ ತಿಮ್ಮಾಪುರ ಹಾಗೂ ನೆಹರುನಗರದ ಮಹಮದ್ ಶಫಿ ಅಬ್ದುಲ್ ಅಜೀಜ್ ಸಿಕ್ಕಿಬಿದ್ದ ಜೂಜಾಟಗಾರರು. ಇಸ್ಪಿಟ್ ಎಲೆಗಳ ಮೇಲೆ ಹಣಕಟ್ಟಿ ಆಡವಾಡುತ್ತಿದ್ದಾಗ ಪೊಲೀಸ್ ದಾಳಿ ನಡೆದಿದ್ದು, ಆಟಕ್ಕೆ ಬಳಿಸಿದ್ದ 3250 ರೂ ಹಣದ ಜೊತೆ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.