ಕಾರವಾರ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಷ್ಣು ಜಿ ಮೋಹನ್ ಎಂಬಾತರು ಮುಂದೆ ಹೋಗುತ್ತಿದ್ದ ಕಾರಿಗೆ ಬೈಕ್ ಗುದ್ದಿ ಮೂಳೆ ಮುರಿದುಕೊಂಡಿದ್ದಾರೆ.
ಕದ್ರಾ ರಾಜೀವನಗರದ ಜೆಸಿಬಿ ಆಪರೇಟರ್ ಆಗಿದ್ದ ವಿಷ್ಣು ಅವರು ಕಾರವಾರ ಕಡೆಯಿಂದ ಗೋವಾ ಕಡೆ ಬೈಕ್ ಓಡಿಸುತ್ತಿದ್ದರು. ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ಅವರು ತೆರಳಿದ್ದು, ಆ ಬೈಕಿನ ಹಿಂದೆ ಕದ್ರಾದ ಸೆಲ್ವಕುಮಾರ್ ಕೂತಿದ್ದರು.
ಖಾಪ್ರಿ ದೇವಾಲಯದ ಬಳಿ ನೇರವಾಗಿ ಹೋಗದೇ ಬೈಕನ್ನು ಅಡ್ಡಕ್ಕೆ ತಿರುಗಿಸಿದ್ದರಿಂದ ಭಟ್ಕಳದ ಸಯ್ಯದ್ ಉವೇಸ್ ಅವರ ಕಾರಿಗೆ ಗುದ್ದಿಕೊಂಡರು. ಪರಿಣಾಮ ವಿಷ್ಣು ಅವರ ಕಾಲು ಮುರಿದಿದ್ದು, ಹಿಂಬದಿ ಸವಾರ ಸೆಲ್ವಕುಮಾರ್ ಅವರ ಮುಖಕ್ಕೆ ಪೆಟ್ಟಾಗಿದೆ.
ಹೊಂಡಕ್ಕೆ ಬಿದ್ದು ಜೀವಬಿಟ್ಟ ವೃದ್ಧ
ಹಳಿಯಾಳ: 85 ವರ್ಷದ ಕೃಷ್ಣ ಹೊನ್ನಪ್ಪ ಕಾನಜಿ ಎಂಬಾತರು ಜನಗಾ ಹೊಂಡಕ್ಕೆ ಹಾರಿ ಜೀವ ಬಿಟ್ಟಿದ್ದಾರೆ. ನಂದಿಗದ್ದಾದ ಅವರು ಸೆ 30ರಂದು ಮಧ್ಯಾಹ್ನ ಮನೆಯಿಂದ ಹೊರಟಿದ್ದು, ನಂತರ ಶವವಾಗಿ ಸಿಕ್ಕಿದ್ದಾರೆ.