ಭಟ್ಕಳ: ಸರ್ಕಾರಿ ಆಸ್ಪತ್ರೆಯ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನಲೆ ವಾಹನ ಚಾಲಕರು ರಸ್ತೆ ನಡುವೆ ವಾಹನದ ಟೈಯರ್ ಇಟ್ಟು ಅದರ ಮೇಲೆ `ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ\’ ಎಂದು ಬರೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ!
ಸರಿಯಿದ್ದ ರಸ್ತೆಯನ್ನು ಕಳೆದ ವರ್ಷ ಮ್ಯಾನ್ಹೋಲ್ ಅಳವಡಿಕೆಗಾಗಿ ಅಗೆಯಲಾಗಿದ್ದು, ಆ ಕಾಮಗಾರಿ ಮುಗಿಸಿದ ನಂತರ ರಸ್ತೆಯ ಮರು ಡಾಂಬರೀಕರಣ ನಡೆದಿಲ್ಲ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗಿದ್ದು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಸಮೀಪದ ಆಟೋ ಚಾಲಕರು ಹಾಗೂ ಇತರೆ ವಾಹನ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಆಸ್ಪತ್ರೆ ಎದುರಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಮಳೆ ಅವಧಿಯಲ್ಲಂತೂ ಸಂಚಾರ ಸಾಧ್ಯವೇ ಇಲ್ಲ. ಬೈಕಿನಲ್ಲಿ ಚಲಿಸುವ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಅದಾಗಿಯೂ ಅಧಿಕಾರಿಗಳಿಗೆ ಸಮಸ್ಯೆ ಅರ್ಥವಾಗಿಲ್ಲ ಎಂಬುದು ಜನರ ದೂರು.