ಯಲ್ಲಾಪುರ: ನವರಾತ್ರಿ ಅಂಗವಾಗಿ ಗ್ರಾಮದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಕ್ಟೊಬರ್ 4 ಹಾಗೂ 8ರಂದು ಅನ್ನ ಸಂತರ್ಪಣೆ ಮೂಲಕ ಪ್ರಸಾದ ವಿತರಣೆ ನಡೆಯಲಿದೆ.
ಭಗತ್ ಸಿಂಗ್ ಆಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಈ ಪುಣ್ಯ ಕಾರ್ಯವನ್ನು ಆಯೋಜಿಸಿದೆ.
ಅಕ್ಟೋಬರ್ 4ರ ಶುಕ್ರವಾರ ಮಧ್ಯಾಹ್ನ 12:30ರಿಂದ 3:30ರವರೆಗೆ ಮೊದಲ ಹಂತದ ಅನ್ನ ಸಂತರ್ಪಣೆ ನಡೆಯಲಿದೆ. ಅಕ್ಟೋಬರ್ 8ರ ಮಂಗಳವಾರ ಮಧ್ಯಾಹ್ನ 12:30ರಿಂದ 3:30ರವರೆಗೆ ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರ ಅವರ ಸಹಯೋಗದಲ್ಲಿ ಕನ್ನಡಪರ ಸಂಘಟನೆಯವರು ಎರಡನೇ ಹಂತದ ಅನ್ನ ಸಂತರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಸಂತೋಷ ನಾರಾಯಣ ನಾಯ್ಕ ಸಂಘಟಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಬೋಜನ ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ.