ಕಾರವಾರ :
ತಾಲೂಕಿನ ಮೂಡಗೇರಿಯ ಸ್ಮಶಾನದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 66 ಸಾವಿರ ರೂ. ಮೌಲ್ಯದ 103.250 ಲೀಟರ್ ಗೋವಾ ಮದ್ಯವನ್ನು ಸೋಮವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗಸ್ತಿನಲ್ಲಿದ ಅಬಕಾರಿ ಅಧಿಕಾರಿಗಳನ್ನು ನೋಡಿದ ಆರೋಪಿಯು ದ್ವಿಚಕ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪರಿಶೀಲನೆ ನಡೆದಿದ್ದು ಚೀಲದಲ್ಲಿದ್ದ 18 ಲೀಟರ್ ಗೋವಾ ಮದ್ಯ,
71.250 ಲೀಟರ್ ಗೋವಾ ಫೆನ್ನಿ ಹಾಗೂ 24 ಲೀಟರ್ ಗೋವಾ ಬಿಯರ್ ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಪತ್ತೆಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಅಧಿಕಾರಿ ಮಹಾಂತೇಶ ಹಾಗೂ ಸಿಬ್ಬಂದಿ ಇದ್ದರು.
