
ಕಾರವಾರ:
ಅದಿರು ನಾಪತ್ತೆ ಕೇಸ್ನಲ್ಲಿ ನ್ಯಾಯಾಲಯದಿಂದ ಬಿಗ್ ರಿಲೀಪ್ ಸಿಕ್ಕಿರುವ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರು ಶನಿವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿದರು.
ಭೇಟಿಯ ವೇಳೆ ಅದಿರು ಪ್ರಕರಣದ ವಿಚಾರವಾಗಿ ಒಂದಿಷ್ಟು ಮಾತುಕತೆ ನಡೆಸಿದ್ದರು ಜೊತೆಗೆ ಮುಂದಿನ ದಿನದಲ್ಲಿ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಸಹ ಚರ್ಚೆ ನಡೆಸಲಾಯಿತು. ಇನ್ನೂ ಶಾಸಕ ಸತೀಶ್ ಸೈಲ್ ಅವರು ಸೋಮವಾರದಂದು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.