ಶಿರಸಿ: ಯಾವುದೇ ಅನುಮತಿ ಪಡೆಯದೇ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಸಾಗಿಸುತ್ತಿದ್ದ ಲಾರಿ ಸಂಚಾರವನ್ನು ಸೋಮವಾರ ಪೊಲೀಸರು ತಡೆದಿದ್ದಾರೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಚಂದಾಪುರದಿoದ ಈ ಲಾರಿ ಹೊರಟಿತ್ತು. ಲಾರಿಯಲ್ಲಿ ಅಪಾರ ಪ್ರಮಾಣದ ಯೂರಿಯಾ ಗೊಬ್ಬರವಿದ್ದು, ಅದನ್ನು ಮಂಗಳೂರಿಗೆ ಸಾಗಿಸಲಾಗುತ್ತಿತ್ತು. 400ಕ್ಕೂ ಅಧಿಕ ಬ್ಯಾಗ್\’ಗಳಲ್ಲಿ ಗೊಬ್ಬರ ತುಂಬಿದ್ದು ಸಂಬAಧಿಸಿದ ದಾಖಲೆಗಳು ಇಲ್ಲದ ಹಿನ್ನಲೆ ಪೊಲೀಸರು ಲಾರಿ ಸಂಚಾರ ತಡೆದರು. ನಂತರ ಕೃಷಿ ಇಲಾಖೆಗೆ ಮಾಹಿತಿ ದೊರೆತ ಹಿನ್ನಲೆ ಅವರು ಯೂರಿಯಾ ತಪಾಸಣೆ ನಡೆಸಿದರು. ಈ ಗೊಬ್ಬರ ಸಾಗಾಟಕ್ಕೆ ಪರವಾನಿಗೆ ಅಗತ್ಯವಿದ್ದು, ನಿಯಮ ಮೀರಿದ ಕಾರಣ ವಿಚಾರಣೆ ಮುಂದುವರೆದಿದೆ.