ಕಾರವಾರ: ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಗ್ರಾ ಪಂ ಪ್ರತಿನಿಧಿ ಹಾಗೂ ನೌಕರರು ಜಿಲ್ಲಾಕೇಂದ್ರ ಕಾರವಾರದಲ್ಲಿಯೂ ಸೋಮವಾರ ತಮ್ಮ ಹೋರಾಟ ಮುಂದುವರೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಹೋರಾಟಗಾರರು ಒತ್ತಾಯಿಸಿದರು.
ವಿವಿಧ ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರಸಹಿತ ಸದಸ್ಯರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು, ಸಿಬ್ಬಂದಿ ಭಾಗವಹಿಸಿ ತಮಗಾದ ಸಮಸ್ಯೆಗಳ ಬಗ್ಗೆ ದೂರಿದರು. `ಸರ್ಕಾರಕ್ಕೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ\’ ಎಂದು ಆಕ್ರೋಶ ವ್ಯಕ್ತಪಡಿಸಿದರು. `ಎಲ್ಲಾ ಸಮಸ್ಯೆಗಳಿಗೂ ಗ್ರಾ ಪಂ ನೌಕರರನ್ನು ಹೊಣೆ ಮಾಡಲಾಗುತ್ತಿದೆ\’ ಎಂದು ಅಸಮಧಾನ ವ್ಯಕ್ತಪಡಿಸಿದರು.
`ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸಬೇಕು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಅವರನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು. ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆ ಮುನ್ನ ಸಂಘದ ಸಲಹೆ ಪಡೆಯಬೇಕು. ಪಿಡಿಒ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ, ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು\’ ಎಂಬುದನ್ನು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಅಧ್ಯಕ್ಷ-ಉಪಾಧ್ಯಕ್ಷರ ಸಂಬಳ ಏರಿಕೆಗೆ ಆಗ್ರಹ
`ಗ್ರಾ ಪಂ ಅಧ್ಯಕ್ಷರಿಗೆ ಮಾಸಿಕ 15 ಸಾವಿರ ರೂ ಹಾಗೂ ಉಪಾಧ್ಯಕ್ಷರಿಗೆ 12 ಸಾವಿರ ರೂ ಗೌರವಧನ ನೀಡಬೇಕು. ಜೊತೆಗೆ ಪಿಂಚಣಿಯನ್ನು ನೀಡಬೇಕು\’ ಎಂದು ಹೋರಾಟಗಾರರು ಆಗ್ರಹಿಸಿದರು. `ಗ್ರಾ ಪಂ ಸದಸ್ಯರಿಗೆ ಉಚಿತ ಬಸ್ ಪಾಸ್, ಆರೋಗ್ಯ ವಿಮೆ ಒದಗಿಸಬೇಕು\’ ಎಂದು ಒತ್ತಾಯಿಸಿದರು.