ನವರಾತ್ರಿ | ದಾಂಡಿಯಾ ನೋಡಲು ಹೋದವನ ಮೇಲೆ ರಾಡಿನಿಂದ ಹಲ್ಲೆ

ಕಾರವಾರ: ಡೆಕೊರೇಶನ್ ಕೆಲಸ ಮಾಡುವ ಅಭಿಷೇಕ ಖಾರ್ವಿ (18) ಎಂಬಾತರ ಮೇಲೆ ಪ್ರಣವ ಬಾಂದೇಕರ್ ಎಂಬಾತರು ಕಬ್ಬಿಣದ ರಾಡಿನಿಂದ ಹೊಡೆದಿದಿದ್ದು, ಅಭಿಷೇಕ ಖಾರ್ವಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ್ಸಾ ಮೂಲದ ಅಭಿಷೇಕ ಖಾರ್ವಿ ಪ್ರಸ್ತುತ ಖಾರ್ವಿವಾಡದಲ್ಲಿ ವಾಸವಾಗಿದ್ದಾರೆ. ಅಕ್ಟೊಬರ್ 6 ರಾತ್ರಿ ಅವರು ಖಾರ್ವಿವಾಡದಿಂದ ಕಳಸವಾಡದ ದುರ್ಗಾದೇವಿ ದೇವಾಲಯದ ಬಳಿ ಬಂದಿದ್ದರು. ಅಲ್ಲಿಂದ ಮುಂದೆ ದಾಂಡಿಯಾ ನೋಡಲು ಅವರು ತೆರಳುತ್ತಿದ್ದರು.

ಆಗ ಸದಾಶಿವಗಡದ ಪ್ರಣವ ಬಾಂದೇಕರ್ 5-6 ಜನರ ಜೊತೆ ಜಗಳ ಮಾಡುತ್ತಿದ್ದು, ಇದನ್ನು ನೋಡಿದ ಅಭಿಷೇಕ್ `ಸುಮ್ಮನೆ ಇಲ್ಲಿ ಯಾಕೆ ಜಗಳ ಮಾಡುತ್ತೀಯಾ?\’ ಎಂದು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಪ್ರಣವ ಬಾಂದೇಕರ್ `ಅದೆಲ್ಲ ನಿನಗೆ ಏಕೆ ಬೇಕು?\’ ಎಂದು ಪ್ರಶ್ನಿಸಿ ಕೆಟ್ಟದಾಗಿ ಬೈದಿದ್ದು, ಜೊತೆಗೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಾಯಪಡಿಸಿದ್ದಾರೆ.

ಮತ್ತಷ್ಟು ಹೊಡೆಯಲು ಬಂದಾಗ ಅಲ್ಲಿದ್ದವರು ತಪ್ಪಿಸಿ ಗಾಯಗೊಂಡ ಅಭಿಷೇಕರನ್ನು ಆಸ್ಪತ್ರೆಗೆ ದಾಖಲಿಸಿದರು. ಕಾರವಾರ ನಗರಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ವಿಚಾರಿಸಿದರು. ತನ್ನ ತಾಯಿ ಜೊತೆ ಚರ್ಚಿಸಿದ ನಂತರ ಅಭಿಷೇಕ್ ವಿವರ ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡರು.

  • Sanjay Patil

    Related Posts

    ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!

    ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…

    ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

    ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page