ಯಲ್ಲಾಪುರ: ನವರಾತ್ರಿ ಹಿನ್ನಲೆ ಗ್ರಾಮದೇವಿ ಸನ್ನಿಧಿಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಗಳವಾರ ಅಡುಗೆ ಮಾಡುತ್ತಿರುವಾಗ ಅಗ್ನಿ ಅವಘಡ ನಡೆದಿದೆ. ಸಂಘಟಕರು ಅಡುಗೆ ತಯಾರಿಕೆಗೆ ಬ್ಲಾಸ್ಟಪ್ರೂಪ್ ಗ್ಯಾಸ್ ಸಿಲೆಂಡರ್ ಬಳಕೆ ಮಾಡಿದ ಕಾರಣ ದೊಡ್ಡ ಅವಘಡ ನಡೆದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ಆರಿಸಿದ್ದು, ಅನ್ನ ಸಂತರ್ಪಣೆಗೆ ಕಾರ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.
ಆಟೋ ಯೂನಿಯನ್ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಮಂಗಳವಾರ ಉತ್ತರ ಭಾರತದ ವಿಷ್ಣು ಸಮಾಜದವರು ಈ ಪುಣ್ಯ ಕೆಲಸದಲ್ಲಿ ಭಾಗಿಯಾಗಿದ್ದರು. ಸೋಮವಾರ ರಾತ್ರಿಯಿಂದಲೇ ಇದಕ್ಕೆ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ ಅಡುಗೆ ತಯಾರಿ ಮಾಡುತ್ತಿರುವಾಗ ಗ್ಯಾಸ್ ಸಿಲೆಂಡರ್\’ಗೆ ಬೆಂಕಿ ತಗುಲಿತು.
ಜ್ವಾಲೆ ಹೊತ್ತಿ ಉರಿಯುವ ಮುನ್ನವೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅನಾಹುತ ತಡೆದರು. ಸಿಲೆಂಡರ್ ಹೊರಭಾಗ ಬೆಂಕಿ ಕಾಣಿಸಿಕೊಂಡಿದ್ದರಿAದ ಕೆಲವರು ಆತಂಕಕ್ಕೆ ಒಳಗಾಗಿದ್ದು, ಬ್ಲಾಸ್ಟಪ್ರೂಪ್ ಸಿಲೆಂಡರ್\’ನ ವಿಷಯ ತಿಳಿದರು ನಿರಾಳರಾದರು. ಇದಾದ ನಂತರ ಅನ್ನ ಸಂತರ್ಪಣೆ ಕಾರ್ಯ ನಡೆದಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.