ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ: ಅಬಕಾರಿ ವಾಹನ ಚಾಲಕನಿಂದ ಆತ್ಮಹತ್ಯೆ ಬೆದರಿಕೆ!

ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿತ ಅಧಿಕಾರಿಗಳು ತಮ್ಮದೇ ವಾಹನ ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ವಾಹನ ಚಾಲಕರಾಗಿರುವ ಡಿ ಎಂ ಗಾಯಕವಾಡ ಎಂಬಾತರು ಮದ್ಯ ಸೇವಿಸಿ ಕಚೇರಿಗೆ ಆಗಮಿಸುತ್ತಿದ್ದು, ಇದರಿಂದ ಅಲ್ಲಿನ ನೌಕರರು ಬೇಸತ್ತಿದ್ದರು. ಎಷ್ಟು ಬಾರಿ ಹೇಳಿದರೂ ಗಾಯಕವಾಡ ಅವರು ಕುಡಿಯುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಅಬಕಾರಿ ಉಪಅಧೀಕ್ಷಕ ಶಿವಪ್ಪ ಎಚ್ ಎಸ್ ಗಾಯಕವಾಡರ ವರ್ತನೆಯ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ವರದಿಯನ್ನು ಸಹ ಮೇಲಧಿಕಾರಿಗಳಿಗೆ ರವಾನಿಸಿದ್ದರು.

ಈ ಹಿನ್ನಲೆ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪ್ರಾಧಿಕಾರದಿಂದ ಅಬಕಾರಿ ಉಪನಿರೀಕ್ಷಕರಿಗೆ ಸೂಚನೆ ಬಂದಿತ್ತು. ಸೆ 19ರಂದು ಚಾಲಕ ಡಿ ಎಂ ಗಾಯಕವಾಡ ಅವರಿಗೆ ಅಬಕಾರಿ ಉಪನಿರೀಕ್ಷಕ ಶಿವಪ್ಪ ಎಚ್ ಎಸ್ ಅವರು ನೋಟಿಸ್ ನೀಡಿದ್ದರು. ನೋಟಿಸ್ ನೋಡಿ ಸಿಟ್ಟಾದ ಚಾಲಕ `ನಾನು ಸಾವಿಗೆ ಶರಣಾಗುವೆ\’ ಎಂದು ಕಾರವಾರ ವಿಳಾಸದೊಂದಿಗೆ ಅಬಕಾರಿ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ. `ಹಿರಿಯ ಅಧಿಕಾರಿಗಳ ಕಿರುಕುಳದಿಂದ ನಾನು ಸಾವನಪ್ಪುತ್ತೇನೆ. ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ\’ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ!

ಇದನ್ನು ಅರಿತ ಶಿವಪ್ಪ ಅವರು ಅದೇ ದಿನ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಅಕ್ಟೊಬರ್ 7ರಂದು ಆತ್ಮಹತ್ಯೆ ಬೆದರಿಕೆ ಒಡ್ಡಿದವನ ವಿರುದ್ಧ ಪ್ರಕರಣ ದಾಖಲಾಗಿದೆ.

  • Sanjay Patil

    Related Posts

    ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!

    ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…

    ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

    ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page