ಕುಮಟಾ: ಕುಡ್ಲೆ ಕಡಲತೀರದಲ್ಲಿನ ಅಲೆಗೆ ಕೊಚ್ಚಿ ಹೋಗಿದ್ದ ಉತ್ತರ ಪ್ರದೇಶದ ರಾಹುಲ್ಕುಮಾರ (28) ಎಂಬಾತರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಮಂಗಳವಾರ ಸಂಜೆ ಮುರಾರಿ ಬಾಪುರವರ ರಾಮಕಥಾ ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ಕುಮಾರ ನಂತರ ಸಮುದ್ರಕ್ಕೆ ಇಳಿದಿದ್ದ. ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿರುವಾಗ ಬೊಬ್ಬೆ ಹೊಡೆದಿದ್ದ. ಇದನ್ನು ನೋಡಿದ ಜೀವರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ, ಪ್ರದೀಪ ಅಂಬಿಗ ಜಟ್ ಸ್ಕೀ ಮೂಲಕ ತೆರಳಿ ಆತನನ್ನು ದಡಕ್ಕೆ ತಂದರು.