ಶಿರಸಿ: ಎಸ್‌ಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುವ ವಿಶ್ವಾಸ ಪೈ ಫೇಸ್ಬುಕ್ ಜಾಹೀರಾತು ನೋಡಿ 13.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಅತ್ಯಧಿಕ ಲಾಭ ನೀಡುವುದಾಗಿ ನಂಬಿಸಿದ ವಂಚಕರು ಅಸಲನ್ನು ಸಹ ಹಿಂತಿರುಗಿಸಿಲ್ಲ!
ನಿಲೇಕೆಣಿ ವಿಜಯನಗರದ ವಿಶ್ವಾಸ ಗಜಾನನ ಪೈ ಅಗಸ್ಟ 20ರಂದು ಫೇಸ್ಬುಕ್ ನೋಡುತ್ತಿದ್ದಾಗ `ಆದಿತ್ಯ ಬಿರ್ಲಾ ಮನಿ ಲಿಮಿಟೆಡ್\’ ಹೆಸರಿನ ಜಾಹೀರಾತು ಗಮನಿಸಿದ್ದಾರೆ. ಆನ್‌ಲೈನ್ ಟ್ರೆಡಿಂಗ್ ಮೂಲಕ ಅತಿ ಹೆಚ್ಚು ಹಣಗಳಿಸಬಹುದು ಎಂದು ಅವರು ನಂಬಿ ವಾಟ್ಸಪ್ ಗ್ರೂಪಿಗೆ ಸೇರಿದ್ದಾರೆ. ಅಲ್ಲಿ ರಾಹುಲ್ ಮಿತ್ತಲ್ ಹಾಗೂ ಅಧಿತಿ ಶರ್ಮಾ ಎಂಬಾತರು ಪರಿಚಯವಾಗಿದ್ದು, ಅವರ ಮಾತಿಗೆ ಮರುಳಾಗಿದ್ದಾರೆ. ಅಗಸ್ಟ 26ರಂದು ತಮ್ಮ ಎಸ್‌ಬಿಐ ಖಾತೆಯಿಂದ ಪಂಜಾAಬ್ ಸಿಂಡ್ ಬ್ಯಾಂಕ್ ಖಾತೆಗೆ 1350000 ರೂ ಜಮಾ ಮಾಡಿದ್ದಾರೆ.
ಇದಾದ ನಂತರ ಅವರ ವಾಲೆಟ್\’ನಲ್ಲಿ 4248000ರೂ ಲಾಭ ಬಂದಿರುವ ಬಗ್ಗೆ ಕಾಣಿಸಿದ್ದು, ಆ ಹಣವನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಹಣ ಸಿಗದ ಕಾರಣ ಅಡ್ಮಿನ್ ಆದ ರಾಹುಲ್ ಮಿತ್ತಲ್ ಹಾಗೂ ಅಧಿತಿ ಶರ್ಮಾ ಅವರನ್ನು ವಿಚಾರಿಸಿದ್ದು ಆ ಇಬ್ಬರೂ ವಿಶ್ವಾಸ್ ಪೈ ಅವರ ಫೋನ್ ನಂ\’ನ್ನು ಬ್ಲಾಕ್ ಮಾಡಿದ್ದಾರೆ. ವಾಟ್ಸಪ್ ಗ್ರೂಪನ್ನು ಡಿಲಿಟ್ ಮಾಡಿದ್ದಾರೆ.
ಹಣ ಕಳೆದುಕೊಂಡ ವಿಶ್ವಾಸ ಅವರು ಪೊಲೀಸರ ಮೇಲೆ ವಿಶ್ವಾಸವಿರಿಸಿ ಇದೀಗ ದೂರು ನೀಡಿದ್ದಾರೆ. ಆರೋಪಿತರನ್ನು ಹುಡುಕಿ ತಮ್ಮ ಹಣ ಮರಳಿಸುವಂತೆ ಅವರು ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.