ಕಾರವಾರ: ಶಿಪ್ಟ್ ಕಾರಿನಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ದೇವಳಮಕ್ಕಿಯ ಧನಂಜಯ್ ಕೋಳಮಕರ್ (47) ಎಂಬಾತರು ಕದ್ರಾ ಪಿಎಸ್ಐ ಸುನೀಲ ಬಂಡಿವಡ್ಡರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಅಕ್ಟೊಬರ್ 8ರ ನಸುಕಿನ 1 ಗಂಟೆ ಅವಧಿಯಲ್ಲಿ ಅಣಶಿ ಕ್ರಾಸಿನ ಬಳಿ ಪೊಲೀಸರು ಕಾರಿಗೆ ಅಡ್ಡಲಾಗಿ ಕೈ ಮಾಡಿದರು. ಆಗ ಧನಂಜರ್ ಕೋಳಮಕರ್ ಓಡಿಸುತ್ತಿದ್ದ ಕಾರಿನಲ್ಲಿ 55 ವಿಸ್ಕಿ ಬಾಟಲಿಗಳಿದ್ದು, ಅವೆಲ್ಲವೂ ಗೋವಾ ರಾಜ್ಯದ್ದಾಗಿದ್ದವು. ಗೋವಾದಿಂದ ಕಡಿಮೆ ಬೆಲೆಗೆ ಸರಾಯಿ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡರು. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ಆ ಮದ್ಯವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಹಿನ್ನಲೆ ಪೊಲೀಸರು ಧನಂಜಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.