ಶಿರಸಿ: ಬೇರೆ ಊರಿಗೆ ವರ್ಗವಾದರೂ ಅಲ್ಲಿಗೆ ತೆರಳದೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಡಾ ಗಜಾನನ ಭಟ್ಟ ಅವರನ್ನು ಅಮಾನತು ಮಾಡಬೇಕು ಎಂದು ಶಿರಸಿಯ ಕೆಲವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
`ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂತ್ರಾಂಗ ತಜ್ಞ ಡಾ ಗಜಾನನ ಭಟ್ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಅಗತ್ಯ\’ ಎಂದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಹಾಯಕ ಆಯುಕ್ತರ ಮೂಲಕ ಬುಧವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
`ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಗಜಾನನ ಭಟ್ ಅವರು ಕಳೆದ ಜುಲೈ 19ರಂದು ಸರಕಾರ ನಡೆಸಿದ ವರ್ಗಾವಣೆಯ ಕೌನ್ಸಿಲಿಂಗ್\’ನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ಆಯ್ಕೆ ಮಾಡಿಕೊಂಡಿದ್ದರು. ಈ ಹಿನ್ನಲೆ ಸರ್ಕಾರ ಅವರ ವರ್ಗಾವಣೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಅಗಸ್ಟ 29ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಅದಾಗಿಯೂ ಅವರು ವರ್ಗವಾದ ಪ್ರದೇಶಕ್ಕೆ ತೆರಳಿಲ್ಲ\’ ಎಂದು ದೂರಿದರು.
`ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಪ್ರಭಾರವನ್ನು ಪ್ರಸೂತಿ ತಜ್ಞೆ ಡಾ ನೇತ್ರಾವತಿ ಎನ್. ಸಿರ್ಸಿಕರ್ ಅವರಿಗೆ ನೀಡಲಾಗಿದೆ. ಅದಾಗಿಯೂ ಆ ಹುದ್ದೆಯಲ್ಲಿ ಡಾ ಗಜಾನನ ಭಟ್ ಅವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮುಂದುವರೆದಿದ್ದಾರೆ\’ ಎಂದು ಆರೋಪಿಸಿದರು.
ಈ ಹಿನ್ನಲೆ ಪ್ರಮುಖರಾದ ಜಗದೀಶ್ ಗೌಡ, ಶ್ರೀನಿವಾಸ್ ನಾಯ್ಕ, ಎನ್ ವಿ.ನಾಯ್ಕ, ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಪ್ರಸನ್ನ ಶೆಟ್ಟಿ, ಶ್ರೀಧರ್ ನಾಯ್ಕ, ಶೈಲೇಶ್ ಗಾಂಧಿ, ಗೀತಾ ಭೋವಿ, ಗೀತಾ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಾಜೇಶ್ ಮಡಿವಾಳ, ರಘು ಬ್ಯಾಗದ್ದೆ, ವಾಣಿ ಶಿರಾಲಿ, ಕಾರ್ಮೆಲಿನ್ ಫೆರ್ನಾಂಡಿಸ್, ನಜಿರ್ ಮೂಡಿ, ಪ್ರದೀಪ್ ಪವಾರ್, ಮುಜಿಬ್, ಪ್ರಸನ್ನ ನಾಯ್ಕ, ಗಂಗಾಧರ್ ನಾಯ್ಕ ಬ್ಯಾಗದ್ದೆ, ದತ್ತಾತ್ರೇಯ ನಾಯ್ಕ ಬ್ಯಾಗದ್ದೆ ಅವರ ಅಮಾನತಿಗೆ ಆಗ್ರಹಿಸಿ ಪತ್ರ ರವಾನಿಸಿದರು.