ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಿವಿಧ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ ಅನಾರೋಗ್ಯದ ಕಾರಣ ಅಕ್ಟೊಬರ್ 6ರಂದು ರಾತ್ರಿ ಅವರು ಜೊಯಿಡಾದ ಬಸ್ಸು ಹತ್ತಿದ್ದು, ನಂತರ ವಿನಯಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ವೇಳೆ ವಿನಯಾ ಅವರ ತಂದೆ ವಿಶ್ವನಾಥ ಸುಧೀರ್ ಅವರು ವಿನಯಾ ಅವರ ಸ್ನೇಹಿತೆ ಸೋನಿಯಾ\’ಗೆ ಕರೆ ಮಾಡಿದ್ದಾರೆ.
ವಿನಯಾ ನಿನ್ನೆ ರಾತ್ರಿಯೇ ಊರಿನ ಬಸ್ಸು ಹತ್ತಿರುವುದಾಗಿ ಸೋನಿಯಾ ಹೇಳಿದ್ದಾರೆ. ಕೊನೆಯದಾಗಿ ಮಾತನಾಡಿದ ವಿನಯಾ ಅ 7ರ ಬೆಳಗ್ಗೆ ರಾಮನಗರಕ್ಕೆ ಬರುವುದಾಗಿ ಹೇಳಿದ್ದು, ವಿನಯಾರನ್ನು ಮನೆಗೆ ಕರೆತರಲು ಹೋದ ಅವರ ತಂದೆಗೆ ಆಕೆ ಸಿಕ್ಕಿಲ್ಲ. ರಾಮನಗರದ ಸಂಬoಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.
ಈ ಹಿನ್ನಲೆ ಮಗಳನ್ನು ಹುಡುಕಿಕೊಡಿ ಎಂದು ವಿಶ್ವನಾಥ್ ಸುಧೀರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.