ಯಲ್ಲಾಪುರ: ಉಪಳೇಶ್ವರದಲ್ಲಿ ಕಾರು ಹಾಗೂ ಬೈಕಿನ ನಡುವೆ ಅಪಘಾತ ನಡೆದಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಅಕ್ಟೊಬರ್ 9ರಂದು ನೂತನನಗರ ಜಡ್ಡಿಯ ಸಾಧಿಕ ಮಹಮದ್ ಗೌಸ್ ಎಂಬಾತರು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಶಿರಸಿ ಕೊಂಡಗದ್ದೆಯ ಪರಮೇಶ್ವರ ಕೃಷ್ಣ ಸಿದ್ದಿ ಸಹ ಈ ವೇಳೆ ಬೈಕ್ ಚಲಾಯಿಸಿಕೊಂಡು ಯಲ್ಲಾಪುರದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಬೈಕಿನಲ್ಲಿ ನವೀನ ಪರಮೇಶ್ವರ ಸಿದ್ದಿ ಹಿಂದೆ ಕೂತಿದ್ದರು. ಪರಮೇಶ್ವರ ಸಿದ್ದಿ ಓಡಿಸುತ್ತಿದ್ದ ಬೈಕಿಗೆ ಸಾಧಿಕ್ ಗೌಸ್ ಉಪಳೇಶ್ವರದ ಬಳಿ ಎದುರಿನಿಂದ ಡಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡರು.
ಈ ಅಪಘಾತದಲ್ಲಿ ಎರಡು ವಾಹನ ಜಖಂ ಆಗಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. `ಅತ್ಯಂತ ವೇಗವಾಗಿ ಕಾರು ಓಡಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ\’ ಎಂದು ಮಂಚಿಕೇರಿಯ ರವಿ ಗಣಪತಿ ಸಿದ್ದಿ ಸಂತ್ರಸ್ತರ ಪರವಾಗಿ ಪೊಲೀಸ್ ದೂರು ನೀಡಿದ್ದಾರೆ. ಅಪಘಾತ ನಡೆಸಿದ ಸಾಧಿಕ್ ಗೌಸ್\’ರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.