ಯಲ್ಲಾಪುರ: ಉಮ್ಮಚ್ಗಿ ಜನತಾ ಕಾಲೋನಿ ಎಪಿಎಂಸಿ ಬಳಿ ಮಟ್ಕಾ ಆಡಿಸುತ್ತಿದ್ದ ರಾಘವೇಂದ್ರ ನಾಗೇಶ ಪಟಗಾರ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ರಾಘವೇಂದ್ರ ಪಟಗಾರ್ ಜೂಜಾಟದಿಂದ ಸಂಗ್ರಹವಾದ ಹಣವನ್ನು ಶಿರಸಿ ರಾಮನಗರದ ಮಂಜವಳ್ಳಿಯ ದಿನೇಶ ಸುಬ್ರಾಯ ನಾಯ್ಕ ಎಂಬಾತರಿಗೆ ನೀಡುವ ಬಗ್ಗೆ ಹೇಳಿದ್ದು, ಈ ಇಬ್ಬರ ಮೇಲೆಯೂ ಪೊಲೀಸ್ ಉಪ ನಿರೀಕ್ಷಕ ಶೇಡಜಿ ಚವ್ಹಾಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೊಬರ್ 10ರ ಮಧ್ಯಾಹ್ನ 3ಗಂಟೆ ಅವಧಿಯಲ್ಲಿ ರಾಘವೇಂದ್ರ ಪಟಗಾರ ಉಮ್ಮಚಗಿಯ ಎಪಿಎಂಸಿ ಬಳಿ ಜೂಜಾಟ ಆಡಿಸುತ್ತಿದ್ದ. ರಸ್ತೆಯಲ್ಲಿ ಹೋಗುವವರನ್ನು ಕರೆದು 1ರೂಪಾಯಿಗೆ 80ರೂ ಕೊಡುವುದಾಗಿ ತಿಳಿಸಿ ಹಣ ಪಡೆಯುತ್ತಿದ್ದ. ಇದನ್ನು ನೋಡಿದ ಪಿಎಸ್‌ಐ ಶೇಡಜಿ ಚೌಹಾಣ್ ಆತನ ಬಳಿಯಿದ್ದ 480ರೂಪಾಯಿಯನ್ನು ವಶಕ್ಕೆ ಪಡೆದರು. `ಮಟ್ಕಾದಿಂದ ಸಂಗ್ರಹಿಸಿದ ಹಣ ಏನು ಮಾಡುವೆ?\’ ಎಂದು ಪ್ರಶ್ನಿಸಿದಾಗ ಆತ ಅದನ್ನು ಪಡೆಯುವ ದಿನೇಶ ನಾಯ್ಕ ಎಂಬಾತರ ಮಾಹಿತಿ ನೀಡಿದ್ದು, ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡರು. ಹಣದ ಜೊತೆ ಜೂಜಾಟಕ್ಕೆ ಬಳಸಿದ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು.