ಶಿರಸಿ ಆಸ್ಪತ್ರೆ: ಡಾ ಗಜಾನನ ಭಟ್ಟರ ಸೇವೆ ಯಾರಿಗೆ ಬೇಕು.. ಯಾರಿಗೆ ಬೇಡ..?

ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ ಗಜಾನನ ಭಟ್ಟ ಅವರನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಯಾರೂ ಯುರೋಲಜಿಸ್ಟ್ ತಜ್ಞರಿಲ್ಲ. ಹೀಗಾಗಿ ಡಾ ಗಜಾನನ ಭಟ್ಟ ಅವರು ಈ ಜಿಲ್ಲೆಗೆ ಬೇಕು. ಡಾ ಗಜಾನನ ಭಟ್ಟ ಅವರು ಸರ್ಕಾರಿ ವೈದ್ಯರಾದರೂ ತಮ್ಮಲ್ಲಿ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅವರು ಸಹ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಅವರು ಇಲ್ಲಿ ಬೇಡ!

`ಡಾ ಗಜಾನನ ಭಟ್ಟ ಅವರು ಸಾಕಷ್ಟು ಅನುಭವಿ ವೈದ್ಯರು. ಹಲವು ವಿಷಯಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅವರಲ್ಲಿನ ಜ್ಞಾನ ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಸಂಪನ್ಮೂಲ. ಹೀಗಾಗಿ ಅವರನ್ನು ಇಲ್ಲಿ ಉಳಿಸಿಕೊಳ್ಳಬೇಕು\’ ಎಂಬುದು ಒಂದಷ್ಟು ಜನರ ವಾದ. `ಡಾ ಗಜಾನನ ಭಟ್ಟರು ಎಷ್ಟೇ ಅಧ್ಯಯನಶೀಲರಾಗಿದ್ದರೂ ಅದು ಬೇರೆಯವರಿಗೆ ಉಪಯೋಗಕ್ಕಿಲ್ಲ. ಕೊರೊನಾ ಅವಧಿಯಲ್ಲಿ ಸಹ ಅವರು ರೋಗಿಗಳನ್ನು ಸರಿಯಾಗಿ ನೋಡಿಲ್ಲ ಎಂಬ ಆರೋಪವಿದೆ. ಹೀಗಾಗಿ ಅವರು ಇಲ್ಲಿ ಬೇಡ\’ ಎಂಬುದು ಅವರನ್ನು ವಿರೋಧಿಸುವವರ ಅಭಿಪ್ರಾಯ!

`ಡಾ ಗಜಾನನ ಭಟ್ಟ ಅವರು ಸ್ನೇಹಪರ ವ್ಯಕ್ತಿತ್ವದವರು. ಜನಪ್ರಿಯ ವೈದ್ಯರು. ದೇಶ-ವಿದೇಶಗಳಲ್ಲಿ ಸಹ ಅವರಿಗೆ ಉತ್ತಮ ಹೆಸರಿದೆ\’ ಎಂದು ಅವರ ಪರ ಮಾತನಾಡುವವರಿದ್ದಾರೆ. `ಡಾ ಗಜಾನನ ಭಟ್ಟರು ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಲ್ಲ. ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ ವಿನ: ಜನಪರ ಕಾಳಜಿ ಹೊಂದಿಲ್ಲ\’ ಎಂದು ದೂರುವವರೂ ಇದ್ದಾರೆ. `ಜನಪ್ರತಿನಿಧಿಗಳು ಉತ್ತಮ ವೈದ್ಯರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು. ಒಳ್ಳೆಯ ವೈದ್ಯರನ್ನು ಜಿಲ್ಲೆಗೆ ತರಲು ಸಾಧ್ಯವಾಗದೇ ಇದ್ದರೆ ಇದ್ದವರನ್ನು ಬೇರೆ ಕಡೆ ವರ್ಗಾಯಿಸುವ ಖಯಾಲಿಯನ್ನಾದರೂ ಬಿಡಬೇಕು\’ ಎಂದು ಕೆಲವರು ಜನಪ್ರತಿನಿಧಿಗಳನ್ನು ಜಾಡಿಸಿದ್ದಾರೆ. `ಡಾ ಗಜಾನನ ಭಟ್ಟರು ಉತ್ತಮ ವೈದ್ಯರಾಗಿದ್ದರೂ ಅನೇಕ ಪ್ರಕರಣಗಳನ್ನು ಮಂಗಳೂರು, ಹುಬ್ಬಳ್ಳಿಗೆ ಶಿಫಾರಸ್ಸು ಮಾಡುತ್ತಾರೆ. ಅಧ್ಯಯನದ ನೆಪದಲ್ಲಿ ಅವರು ದೇಶ-ವಿದೇಶ ಪ್ರವಾಸ ಮಾಡುವುದರಿಂದ ಸ್ಥಳೀಯರಿಗೆ ಸಿಗುವ ಸೇವೆ ಅಷ್ಟಕಷ್ಟೆ\’ ಎನ್ನುವವರ ಸಂಖ್ಯೆಯೂ ಕಡಿಮೆಯಿಲ್ಲ.

`ಡಾ ಗಜಾನನ ಭಟ್ಟ ಅವರು ಮೂತ್ರಕೋಶದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾರೆ. ಶಿರಸಿ ಮಾತ್ರವಲ್ಲದೇ ವಾರಕ್ಕೆ ಒಮ್ಮೆ ಕಾರವಾರಕ್ಕೂ ಆಗಮಿಸಿ ಜನರ ನೋವು ಆಲಿಸುತ್ತಾರೆ. ಕಿಡ್ನಿಯಲ್ಲಿ ಕಲ್ಲು ಬೆಳೆದವರಿಗೆ ಸೂಕ್ತ ಪರಿಹಾರ ಒದಗಿಸುತ್ತಾರೆ. ಹೀಗಾಗಿ ಅವರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು\’ ಎಂಬುದು ಅವರ ಪರವಾಗಿ ಮಾತನಾಡುವವರ ಕಳಕಳಿ. ವರ್ಗಾವಣೆ ಎಂಬುದು ಸರ್ಕಾರಿ ವೃತ್ತಿಯಲ್ಲಿ ಸಹಜ ನಿಯಮವಾಗಿದ್ದು, ಡಾ ಗಜಾನನ ಭಟ್ಟ ಅವರೇ ಹೊಸಪೇಟೆಗೆ ವರ್ಗಾವಣೆ ಬಯಸಿ ಅರ್ಜಿ ಹಾಕಿದ್ದಾರೆ. ಹೀಗಿರುವಾಗ ಅವರನ್ನು ಬೀಳ್ಕೊಡುವುದರಲ್ಲಿ ತಪ್ಪೇನೂ ಇಲ್ಲ. ಅವರಿಗಿಂತ ಉತ್ತಮ ವೈದ್ಯರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ನಡೆಯಬೇಕು\’ ಎಂಬುದು ಸಮಾನಮನಸ್ಕ ಹೋರಾಟಗಾರರ ಆಗ್ರಹ.

ಶಿರಸಿ ಸಾರ್ವಜನಿಕ ಆಸ್ಪತ್ರೆಯ ಪ್ರಭಾವಿ ವೈದ್ಯರಲ್ಲಿ ಒಬ್ಬರಾಗಿದ್ದ ಡಾ ಗಜಾನನ ಭಟ್ಟ ಅವರ ವರ್ಗಾವಣೆ ವಿಷಯ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. `ಡಾ ಗಜಾನನ ಭಟ್ಟ ಅವರು ಇಲ್ಲಿ ಬೇಡ\’ ಎಂದು ಶಿರಸಿ ಭಾಗದವರು ಹೇಳುತ್ತಿದ್ದರೆ, `ಅವರು ಇಲ್ಲೇ ಇರಲಿ\’ ಎಂದು ಶಿರಸಿ ಹೊರತುಪಡಿಸಿ ಉಳಿದ ಭಾಗದ ಜನ ಹೇಳುತ್ತಿದ್ದಾರೆ. ಇನ್ನೂ ಡಾ ಗಜಾನನ ಭಟ್ಟ ಅವರ ಪರ ಹಾಗೂ ವಿರೋಧವಾಗಿ ನೂರಾರು ಮೂಕರ್ಜಿಗಳು ವಿವಿಧ ಕಡೆ ಸಲ್ಲಿಕೆಯಾಗಿದೆ. ನೂರಾರು ಸಮರ್ಥನೆಗಳ ಜೊತೆ ಸಾವಿರಾರು ಆರೋಪಗಳಿವೆ. ಆದರೆ, ಅದ್ಯಾವುದಕ್ಕೂ ಅಧಿಕೃತ ದಾಖಲೆ ಒದಗಿಸಿದವರಿಲ್ಲ!

  • Sanjay Patil

    Related Posts

    ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!

    ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…

    ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

    ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…

    You Missed

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ಜೋಯಿಡಾ ಗಾವಡೆವಾಡಾದ ಖಾಪ್ರಿ ಜಾತ್ರೆ ಯಶಸ್ವಿ ಸಂಪನ್ನ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ವರ್ಗಾವಣೆಗೊಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರಿಗೆ ಅದ್ದೂರಿ ಬೀಳ್ಕೊಡುಗೆ.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಜಿಂಕೆಯ ಬೇಟೆ, ಓರ್ವನ ಬಂಧನ.

    ಸಿಡಿಲು ಬಡಿದು ನಾಲ್ವರು ಗಂಭೀರ

    ಸಿಡಿಲು ಬಡಿದು ನಾಲ್ವರು ಗಂಭೀರ

    You cannot copy content of this page