ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು.
ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ ಕಾಲ ದಾಂಡಿಯಾ ನೃತ್ಯ ಮಾಡಿದರು. ಆರ್ ವಿ ದೇಶಪಾಂಡೆ ಅವರ ಜೊತೆ ಪತ್ನಿ ರಾಧಾಭಾಯಿ ಅವರು ಹೆಜ್ಜೆ ಹಾಕಿದರು. ದೇಶಪಾಂಡೆ ಅವರ ಅಭಿಮಾನಿಗಳು ಸಹ ಭಕ್ತಿಯಿಂದ ಕುಣಿದು ಕುಪ್ಪಳಿಸಿದರು.
ನವರಾತ್ರಿ ಉತ್ಸವದ ನಿಮಿತ್ತ ಹಳಿಯಾಳ ಪಟ್ಟಣದ ಶಕ್ತಿದೇವಿ ತುಳಜಾಭವಾನಿ ದೇವಸ್ಥಾನದಲ್ಲಿ ದಾಂಡಿಯಾ ನೃತ್ಯ ನಡೆಯುತ್ತಿದೆ. ನಿತ್ಯ ಸಾವಿರ ಸಂಖ್ಯೆಯ ಜನ ಭಾಗವಹಿಸಿ ನೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. `ದಾಂಡಿಯಾ ನೃತ್ಯದಲ್ಲಿ ಭಾಗಿಯಾಗಿದ್ದು ಮಧುರವಾದ ಕ್ಷಣ\’ ಎಂದು ಆರ್ ವಿ ದೇಶಪಾಂಡೆ ಹೇಳಿದ್ದಾರೆ.