
ಹಳಿಯಾಳ:
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ.
ಹಳಿಯಾಳ ತಾಲ್ಲೂಕಿನ 10 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನ ಹಿರಿಯ ಸಾಹಿತಿ ಶಂಕರ ದೇವನೂರು ಉದ್ಘಾಟಿಸಿ ಮಾತನಾಡಿದರು .
ಕನ್ನಡ ಜ್ಯೋತಿ ಬೆಳಕು ನಿರಂತರ ಕನ್ನಡದ ಅಸ್ಮಿತೆಗಾಗಿ ಬೆಳಗಿಸಿದ ದೀಪ ಹಚ್ಚಿ ಮುನ್ನೆಡೆಸುವ ಜೂರೂತ್ತಿನ ನಡುವೆ ಕನ್ನಡದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮೂಲ ನೆಲೆಯ ಭಾಷೆ ತಾಕತ್ತು ಬದುಕಿನ ಬದಲಿಸುವ ಶಕ್ತಿಯಿದೆ ಎಂದು, ನಿಮ್ಮನ್ನು ನೀವು ಪ್ರೀತಿಸಿ, ಬದುಕಿನ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಮಾತನಾಡಿ ಹತ್ತನೇ ಸಮ್ಮೇಳನ ಸಂದರ್ಭದಲ್ಲಿ
ಅನುದಾನವಿಲ್ಲದೆ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಕಷ್ಟ. ಸಮ್ಮೇಳನ ಹಮ್ಮಿಕೊಳ್ಳುವುದಿಂದ ತಾಲ್ಲೂಕಿನ ಒಬ್ಬ ಸಾಹಿತಿಗೆ ಜೀವಮಾನದ ಗೌರವ ಕೊಟ್ಟಂತಾಗುತ್ತದೆ. ಪ್ರೀತಿಯಿಂದಾಗಿ ಪ್ರೀತಿಗಾಗಿ ಜಾತ್ರೆಯನ್ನು ಮಾಡುತ್ತೇವೆ. ಅದೇ ರೀತಿ ಮೊದಲಿಕೆಯನ್ನು ತಡೆಯುವ ಸಲುವಾಗಿ ಸಾಹಿತ್ಯ ಜಾತ್ರೆ ನುಡಿ ಜಾತ್ರೆಯನ್ನು ಮಾಡುತ್ತೇವೆ. ಇದು ಯಾರೋ ಮಾಡುವ ಸರಳ ಸಾಹಿತ್ಯಕ್ಕೆ ಬದಲಾಗಿ ಮಾಡುವ ಸಾಹಿತ್ಯ ಸಮ್ಮೇಳನ ಅಲ್ಲ ಇದು ಪಾರದರ್ಶಕವಾಗಿ ನಡೆಯುತ್ತಿರುವ ನುಡಿ ಹಬ್ಬ ಜಾತಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರುವ ದುಷ್ಟರ ವಿರುದ್ಧ ಸೌಹಾರ್ದತೆ ಬದುಕನ್ನು ಹೇಳಿ ಕೊಡುವುದೇ ಸಾಹಿತ್ಯ ಎಂದು ಆಶಯ ನುಡಿಯಲ್ಲಿ ಹೇಳಿದರು.
ಸಮ್ಮೇಳನಾಧ್ಯಕ್ಷರ ಡಾ. ಡಿ.ಎನ್.ಕಂಬ್ರೇಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬದಲಾದ ಸನ್ನಿವೇಶದಲ್ಲಿ ನಮ್ಮ ಜನತೆಗೆ ಸಾಹಿತ್ಯದ ಮೇಲಿನ ಅಭಿರುಚಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುತ್ತಿದೆ. ಇವರೊಂದಿಗೆ ಸಾಹಿತ್ಯ
ಅಭಿಮಾನಿಗಳು ಸ್ಪಂದಿಸಬೇಕು.ಪ್ರತಿ ಶಾಲೆ, ಮನೆಗಳಲ್ಲಿ ಸಾಹಿತ್ಯದ ಪೂರಕ ವಾತವರಣವನ್ನು ನಿರ್ಮಿಸಬೇಕಾಗಿದೆ. ಸಾಹಿತಿಗಳು ತಮ್ಮಲ್ಲಿಯ ಹಿರಿತನ, ಕಿರಿತನ ಹಾಗೂ ಜೇಷ್ಠತೆಯ ವ್ಯಸನವನ್ನು ತೊರೆದು ಸಾಮರಸ್ಯ ಸಂಭಂಧಗಳೊಂದಿಗೆ ಸಾಹಿತ್ಯವನ್ನು ಪೋಷಿಸಬೇಕಾಗಿದೆ ಎಂದರು. ಮರಾಠಿ ಭಾಷಿಕರು ಇರುವ ಈ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಕಂಪನ್ನು ಬೀರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ. ನಾಟಕ ಪರಂಪರೆ ಮತ್ತೆ ನನ್ನ ವೈಭವನ್ನು ಪಡೆದುಕೊಳ್ಳಿಲಿ. ಬದುಕಿನ ಬಿಂಬಿತವಾಗಿರುವ ಈ ಕನ್ನಡ ಸಾಹಿತ್ಯದ ಉಳಿವಿಗಾಗಿ ಎಲ್ಲರೂ ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಬಗೆಯ ಪ್ರಯೋಗಗಳಾಗುತ್ತಿವೆ. ಕೃಷಿಯಲ್ಲಿ ವಿವಿಧ ಪ್ರಕಾರದ ಕೃಷಿ ಪದ್ಧತಿಗಳನ್ನು ಗುರುತಿಸಬಹುದು. ಅದೆಂದರೆ ನೈಸರ್ಗಿಕ ಕೃಷಿ, ಸಾವಯವ ಕೃಷಿ, ರಾಸಾಯನಿಕ ಕೃಷಿ ಹಾಗೂ ಸಮಗ್ರ ಕೃಷಿ ವಿಧಾನಗಳು. ಈ ನಾಲ್ಕು ವಿಧಾನಗಳಲ್ಲಿ ನಮ್ಮ ದೇಶದ ಕೃಷಿ ಕಾರ್ಯವು ನಡೆದಿರುವುದನ್ನು ನಾವು ನೋಡುತ್ತೇವೆ. ಆಧುನಿಕ ಕೃಷಿ ವಿಧಾನದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಪೀಡನಾಶಕಗಳನ್ನು ಬಳಸಿ ಮಿತಿ ಮೀರಿ ನೀರಿನ ಬಳಕೆ ಮಾಡಿದ ಕಾರಣದಿಂದ ನೆಲ, ಜಲ, ವಾಯು, ಆಹಾರ ಮಾಲಿನ್ಯಗಳುಂಟಾಗಿ ಮಾನವ ಜನಾಂಗಕ್ಕೆ ಅಪಾಯವಾಗುತ್ತಿರುವುದನ್ನು ನಾವು ಕಾಣುತ್ತೇವೆ. ನೈಸರ್ಗಿಕ ಸಂಪನ್ಮೂಲಗಳು ದುರುಪಯೋಗವಾಗಿ ಅವು ತೀರಿಹೋಗುವ ಸಂಭವವೂ ಇರುವುದರಿಂದ ನಾವು ಎಚ್ಚತ್ತುಕೊಳ್ಳುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಕವಿಗಳು ಬರೆದ ಪುಸ್ತಕ ಬಿಡುಗಡೆ, ತೊಗಲು ಗೊಂಬೆಯಾಟ ಪ್ರದರ್ಶನ, ಕಲಾವಿದ ತಂಡಗಳಿಂದ ಕಲಾ ಪ್ರದರ್ಶನ ಹಾಗೂ ವಿಚಾರ ಮಂಥನ ಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು.