ಶಿರಸಿ: ಗಣೇಶ ನಗರದ ಬೈಕ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ರಾಮಪ್ಪ ನಂಜಣ್ಣನವರ್ ಅವರ ತಾಯಿ ಚಂದ್ರವ್ವ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ರಾಮಪ್ಪ ಅವರು ಪೊಲೀಸರ ಬಳಿ ಅಂಗಲಾಚಿದ್ದಾರೆ.
ಮನೆ ಕೆಲಸ ಮಾಡಿಕೊಂಡಿದ್ದ 67 ವರ್ಷದ ಚಂದ್ರವ್ವ ಜೂ 11ರಂದು ಏಕಾಏಕಿ ನಾಪತ್ತೆಯಾಗಿದ್ದು, ಎರಡು ದಿನ ಹುಡುಕಿದರೂ ಪತ್ತೆಯಾಗಿಲ್ಲ. ಮಾನಸಿಕವಾಗಿ ಕುಗ್ಗಿರುವ ಆಕೆಯನ್ನು ರಕ್ಷಿಸಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ.