
ಯಲ್ಲಾಪುರ: ಕೃಷಿ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಂವಾದ ನಡೆಸಲು ಜಂಬೇಸಾಲಿನ ಲತಾ ಹೆಗಡೆ ಅವರಿಗೆ ಆಹ್ವಾನ ದೊರೆತಿದೆ.
ನೈಸರ್ಗಿಕ ಕೃಷಿ ತರಬೇತಿ ಪಡೆದ ಕೃಷಿ ಸಖಿಯರಿಗೆ ಈ ಅವಕಾಶ ಕಲ್ಪಿಸಲಾಗಿದ್ದು, ಲತಾ ಅವರು 10 ಗುಂಟೆ ಕ್ಷೇತ್ರದಲ್ಲಿ ವಿವಿಧ ಬಗೆಯ ಹೂಗಳನ್ನು ಬೆಳೆಯುತ್ತಾರೆ. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜೂನ 18ರಂದು ನಡೆಯಲಿರುವ ಸಂವಾದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ. ರಾಜ್ಯದಿಂದ ಇಬ್ಬರು ಮಾತ್ರ ಇದಕ್ಕೆ ಆಯ್ಕೆಯಾಗಿದ್ದಾರೆ.
ಲತಾ ಅವರ ಪತಿ ರಾಜೀವ ಹೆಗಡೆ ಸಹ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮೊದಲಾದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಮೋದಿ ಜೊತೆ ಸಂವಾದಕ್ಕೆ ಆಯ್ಕೆ ಆಗಿರುವ ಲತಾ ಹೆಗಡೆ ಅವರನ್ನು ವೈಟಿಎಸ್ಎಸ್\’ನ ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅಭಿನಂದಿಸಿದ್ದಾರೆ.