ಹೊನ್ನಾವರ: ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇಲ್ಲಿನ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ನೆರವು ನೀಡುವುದಾಗಿ ಘೋಷಿಸಿದೆ.
ಹೊನ್ನಾವರ ತಾಲೂಕಿನ ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತರು ಪ್ರತಿಭಾ ಪುರಸ್ಕಾರದಲ್ಲಿ ಭಾಗಿಯಾಗಬಹುದು. ಜುಲೈ 10ರ ಒಳಗೆ ಕಂತಾಲಕೇರಿಯಲ್ಲಿರುವ ಸೊಸೈಟಿ ಕಚೇರಿಗೆ ಭೇಟಿ ಮಾಡಿದಲ್ಲಿ ಅನುಕೂಲ. ಅರ್ಜಿ ನಮೂನೆ ಅಲ್ಲಿಯೇ ಲಭ್ಯ. ಮಾಹಿತಿಗೆ 9448148024 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.