
ಅಂಕೋಲಾ: ಗೋಕರ್ಣ ಸೇರಿದಂತೆ ಇಲ್ಲಿನ ಹಲವು ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದೆ.
ಜೀವರಕ್ಷಕ ಸಿಬ್ಬಂದಿ ಮಾತು ಧಿಕ್ಕರಿಸಿ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದಾರೆ. ಗೋಕರ್ಣದ ಕುಡ್ಲೆ ತೀರದಲ್ಲಿ ಭಾನುವಾರ ಸಂಜೆ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಅಪಾಯದ ಹಂತ ತಲುಪಿದ್ದು, ಆತನನ್ನು ತಡೆದ ರಕ್ಷಣಾ ಸಿಬ್ಬಂದಿ ವಿರುದ್ಧ ವಾಗ್ವಾದ ನಡೆಸಿದ್ದಾನೆ. ಅಪಾಯದ ಮುನ್ಸೂಚನೆಗಾಗಿ ಅಲ್ಲಿ ಅಳವಡಿಸಿದ ಕೆಂಪು ಬಾವುಟ ದಾಟಿದಾಗ ಸಿಬ್ಬಂದಿ ಆತನನ್ನು ರಕ್ಷಿಸಿ ಅಲ್ಲಿಂದ ಕರೆತಂದಿದ್ದಾರೆ. ನಿನ್ನೆ ಸಹ ಜೀವರಕ್ಷಕ ಸಿಬ್ಬಂದಿ ಮಾತು ಧಿಕ್ಕರಿಸಿ ತೆರಳಿದ್ದ ಮಹಿಳೆಯೊಬ್ಬರು ಬಂಡೆಯಿAದ ಜಾರಿ ಕೆಳಗೆ ಬಿದ್ದಿದ್ದರು.