
ಶಿರಸಿ: ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ನಕಲಿ ದಾಖಲೆ ಹಂಚುವ ಆರೋಪ ಹೊಂದಿ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ ಎಂಬಾತ ಬಕ್ರೀದ್ ಹಬ್ಬಕ್ಕೆ ಊರಿಗೆ ಬಂದಾಗ ರಾಷ್ಟಿçÃಯ ತನಿಖಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.
ಐದು ಜನರಿಂದ ತನಿಖಾ ತಂಡದವರು ದಾಸನಕೊಪ್ಪದಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಸಹ ಶಿರಸಿಯಲ್ಲಿ ರಾಷ್ಟಿçÃಯ ತನಿಖಾ ಸಂಸ್ಥೆಯವರ ದಾಳಿ ನಡೆದಿತ್ತು. ಪಿಎಫ್ಐ ಕಚೇರಿ ಮೇಲೆ ದಾಳಿ ನಡೆಸಿ, ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಇದೀಗ ಅಬ್ದುಲ್\’ನನ್ನು ವಿಚಾರಣೆಗಾಗಿ ಬೆಂಗಳೂರಿನ ಎನ್ಐಎ ಕಚೇರಿಗೆ ಕರೆದೊಯ್ಯಲಾಗಿದೆ.