
ಜೊಯಿಡಾ: ರಾಮನಗರದ ಚಹಾ ಅಂಗಡಿಯಲ್ಲಿ ರಾಜಾರೋಷವಾಗಿ ಸರಾಯಿ ಮಾರಲಾಗುತ್ತದೆ.
ಬೆಳಗ್ಗೆ 5 ಗಂಟೆಗೆ ಬಾಗಿಲು ತೆಗೆಯುವ ಈ ಅಂಗಡಿಯಲ್ಲಿ ಜೂ 17ರ ಮಧ್ಯಾಹ್ನದವರೆಗೂ ವ್ಯಾಪಾರ ಜೋರಾಗಿತ್ತು. ಆದರೆ, ಮಧ್ಯಾಹ್ನ 1ಗಂಟೆಗೆ ಅಂಗಡಿ ಮೇಲೆ ದಾಳಿ ನಡೆಸಿದ ಪಿಸೈ ಬಸವರಾಜ್ ಮಬನೂರು ಮದ್ಯ ವ್ಯಾಪಾರಿಯನ್ನು ವಶಕ್ಕೆ ಪಡೆದು, ಅಂಗಡಿ ಬಾಗಿಲು ಮುಚ್ಚಿಸಿದರು. ಕುಂಬಾರವಾಡದ ಗಣಪತಿ ದೇಸಾಯಿ (25) ಎಂಬಾತನಿಗೆ ಸೇರಿದ ಅಂಗಡಿ ಅದಾಗಿದ್ದು, ಅಲ್ಲಿ ವಿಸ್ಕಿ ಟ್ರೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಗ್ಲಾಸ್ ಸೇರಿದಂತೆ ಹಲವು ವಸ್ತುಗಳು ದೊರೆತಿವೆ.