
ಕುಮಟಾ: ಗದ್ದೆ ಹೊಂದಿದ ರೈತರು ಈ ಬಾರಿ `ಜಯಾ\’ ಭತ್ತ ಬಿತ್ತನೆಗೆ ಒತ್ತು ನೀಡಿದ್ದಾರೆ.
ಕುಮಟಾ ಕೃಷಿ ಇಲಾಖೆ ಕುಮಟಾ, ಕೂಜಳ್ಳಿ, ಮಿರ್ಜಾನ, ಗೋಕರ್ಣ ಈ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಜಯಾ ಸೇರಿದಂತೆ ಈ ಭಾಗದಲ್ಲಿ ಬೇಡಿಕೆ ಇರುವ ವಿವಿಧ ತಳಿಗಳ ಭತ್ತದ ಬೀಜಗಳನ್ನು ಸಂಗ್ರಹಿಸಿ, ರೈತರಿಗೆ ನೀಡುತ್ತದೆ. ಈ ದಾಖಲೆಗಳ ಪ್ರಕಾರ ರೈತರೇ ಹೆಚ್ಚಾಗಿ ಜಯಾ ಭತ್ತಕ್ಕೆ ಬೇಡಿಕೆ ಇರಿಸಿದ್ದಾರೆ. ಹೀಗಾಗಿ ಜಯಾ ತಳಿಯ ಭತ್ತ ಇದೀಗ ಕೊರತೆಯಾಗಿದೆ.
ಜಯಾ ತಳಿಯ ಭತ್ತದ ಬೀಜಗಳು ರೈತ ಕೇಂದ್ರಗಳಲ್ಲಿ ಲಭ್ಯವಿಲ್ಲದ ವಿಷಯ ತಿಳಿದ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ, ರೈತರಾದ ನರಸಿಂಹ ಭಟ್ಟ, ಮೋಹನ ಗೌಡ,ಬಲಿಂದ್ರ ಗೌಡ ಅವರೊಂದಿಗೆ ಪಟ್ಟಣದಲ್ಲಿರವ ರೈತ ಸಂಪರ್ಕ ಕೆಂದ್ರಕ್ಕೆ ತೆರಳಿ ಅಲ್ಲಿದ್ದ ಕೃಷಿ ಅಧಿಕಾರಿ ಚಂದ್ರಕಲಾ ಬರ್ಗಿ ಪ್ರಶ್ನಿಸಿದರು. ಬೇಡಿಕೆಗೆ ತಕ್ಕಂತೆ ಭತ್ತ ವಿತರಿಸುವಂತೆ ಆಗ್ರಹಿಸಿದರು.