
ಅಂಕೋಲಾ: ಅಲ್ಲಿ ಇಲ್ಲಿ ತಡಕಾಡಿ 18 ಸಾವಿರ ರೂ ಒಟ್ಟು ಮಾಡಿದ್ದ ಅಲಗೇರಿಯ ಅಕ್ಷಯ್ ಆಚಾರಿ (21) ಒಂದು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ. ನಿತ್ಯ ಅದೇ ಬೈಕಿನಲ್ಲಿ ಆತ ಕಾಲೇಜಿಗೆ ಹೋಗುತ್ತಿದ್ದ. ಆದರೆ, ಆ ಬೈಕನ್ನು ಇದೀಗ ಕಳ್ಳರು ಅಪಹರಿಸಿದ್ದಾರೆ.
ಜೂ 15ರಂದು ಬೆಳಗ್ಗೆ 7 ಗಂಟೆಗೆ ಅಂಕೋಲಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಅಧಿಕೃತ `ವಾಹನ ನಿಲ್ದಾಣ\’ ಸ್ಥಳದಲ್ಲಿ ಅಕ್ಷಯ್ ಬೈಕ್ ನಿಲ್ಲಿಸಿದ್ದ. ಮಧ್ಯಾಹ್ನ 2 ಗಂಟೆಗೆ ಆತ ಅಲ್ಲಿಗೆ ಆಗಮಿಸಿದಾಗ ಬೈಕ್ ಅಲ್ಲಿರಲಿಲ್ಲ. ಅವರಿವರಲ್ಲಿ ಪ್ರಶ್ನಿಸಿದಾಗ `ಬೈಕನ್ನು ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು\’ ಎಂಬ ಉತ್ತರ ಬಂದಿತ್ತು. `ಹೋಗುವಲೆಲ್ಲ ಅದನ್ನು ಕೊರಳಿಗೆ ಕಟ್ಟಿಕೊಂಡು ಹೋಗಲಾಗುವುದಿಲ್ಲ\’ ಎನ್ನುವ ಆತ, ಅಷ್ಟು ಜನ ಓಡಾಡುವ ಬಸ್ ನಿಲ್ದಾಣದಂಥ ಪ್ರದೇಶದಲ್ಲಿ, ಅದೂ ಹಗಲಿನ ಹೊತ್ತಿನಲ್ಲಿಯೇ ಬೈಕ್ ನಾಪತ್ತೆ ಆಗಿರುವುದಕ್ಕೆ ಅಚ್ಚರಿಗೆ ಒಳಗಾಗಿದ್ದಾನೆ. `ಬೈಕ್ ಹುಡುಕಿಕೊಡಿ\’ ಎಂದು ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಟಿವಿ ನೋಡಾದರೂ ಪೊಲೀಸರು ತನ್ನ ಬೈಕ್ ಹುಡುಕಿ ಕೊಡುತ್ತಾರೆ ಎಂಬ ನಂಬಿಕೆ ಆತನದ್ದು.