
ಶಿರಸಿ: ಇಲ್ಲಿನ ಸಾರಿಗೆ ಇಲಾಖೆ ಕಚೇರಿಗೆ ಹೊರಟಿದ್ದ ಯಲ್ಲಾಪುರ ತಾಲೂಕಿನ ಕೋಳಿಕೆರೆಯ ಅನಿಲ ಗೊಂದಲ ಹಾಗೂ ಅವರ ಚಿಕ್ಕಪ್ಪನ ಮಗ ಪರಶುರಾಮ ಜಂಬೂರು ಎಂಬಾತರ ಬೈಕ್ ಅಪಘಾತವಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಶೃoಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಾನಗಲ್ಲಿನ ಪರಶುರಾಮ ಮಲ್ಲಪ್ಪ ಬಂಜೂರು ಎಂಬಾತ ಮಾರಿಕಾಂಬಾ ಸ್ಟೇಡಿಯಂ ಬಳಿ ಅವರ ಬೈಕಿಗೆ ತನ್ನ ಬೈಕ್\’ನ್ನು ಹಿಂದಿನಿoದ ಗುದ್ದಿದ್ದಾನೆ. ಇದರಿಂದ ಅಭಿಷೇಕ್\’ನ ಕೈ-ಕಾಲಿಗೆ ಹಾಗೂ ಅನಿಲ ಅವರ ತಲೆಗೆ ಪೆಟ್ಟಾಗಿದ್ದು, ಬೈಕ್ ಗುದ್ದಿದ ಪರಶುರಾಮ ಸಹ ಗಾಯಗೊಂಡಿದ್ದಾನೆ. ಯಲ್ಲಾಪುರದ ಇಬ್ಬರೂ ಟಿಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.